ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ಬೈಕ್​​ ಶೋ ರೂಂ ಬಾಗಿಲು ಮುರಿದು ಕಳ್ಳತನ! - theft of a bike showroom in Balki Bidar

ಮೂವರು ಖದೀಮರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್ ಶೋ ರೂಂ ಬಾಗಿಲು ಮುರಿದು ಕಳ್ಳತನ ಮಾಡಿದ ಘಟನೆ ಬೀದರ್​ ಜಿಲ್ಲೆ ಭಾಲ್ಕಿ ಪಟ್ಟಣದಲ್ಲಿ ನಡೆದಿದ್ದು, ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

theft of a bike showroom in Bidar
ಕಳ್ಳತನದ ಸಿಸಿಟಿವಿ ದೃಶ್ಯ

By

Published : Dec 30, 2019, 7:01 PM IST

Updated : Dec 30, 2019, 8:32 PM IST

ಬೀದರ್: ಮೂವರು ಖದೀಮರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್ ಶೋ ರೂಂ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಕಳ್ಳತನದ ಸಿಸಿಟಿವಿ ದೃಶ್ಯ

ಜಿಲ್ಲೆಯ ಭಾಲ್ಕಿ ಪಟ್ಟಣದ ಮಹಾಲಕ್ಷ್ಮಿ ಬೈಕ್ ಶೋ ರೂಂಗೆ ನುಗ್ಗಿದ ಮೂವರು ಮುಸುಕುಧಾರಿ ಕಳ್ಳರು, ಕಬ್ಬಿಣ ಸಲಾಕೆಗಳಿಂದ ಬಾಗಿಲು ಮುರಿದು ಡ್ರಾಯರ್​ನಲ್ಲಿದ್ದ 25 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ನಿರಂಜನ ಅಷ್ಟೂರೆ ಎಂಬುವರಿಗೆ ಸೇರಿದ ಶೋ ರೂಂ ಇದಾಗಿದ್ದು, ಖದೀಮರು ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಭಾಲ್ಕಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Last Updated : Dec 30, 2019, 8:32 PM IST

ABOUT THE AUTHOR

...view details