ಕರ್ನಾಟಕ

karnataka

ETV Bharat / state

ಅಂಗಡಿ ಮಾಲೀಕನ ದಿಕ್ಕು ತಪ್ಪಿಸಿ ಕಳ್ಳತನ ಮಾಡಿದ ಕಳ್ಳಿಯರ ಗ್ಯಾಂಗ್! - ಮಹಿಳೆಯರ ಕಳ್ಳತನ ಸಿಸಿಟಿವಿಯಲ್ಲಿ ಸೆರೆ

ಗ್ರಾಹಕರ ಸೊಗಿನಲ್ಲಿ ಬಂದ ಆರು ಜನ ಮಹಿಳೆಯರು ಬಟ್ಟೆ ಅಂಗಡಿ ವ್ಯಾಪಾರಿಗೆ ಚಳ್ಳೆ ಹಣ್ಣು ತಿನ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

theft-from-a-womens-gang
ಕಳ್ಳಿಯರ್ ಗ್ಯಾಂಗ್

By

Published : Dec 27, 2019, 8:00 PM IST

Updated : Dec 27, 2019, 9:26 PM IST

ಬೀದರ್:ಬಟ್ಟೆ ಅಂಗಡಿ ವ್ಯಾಪಾರಿಯೊಬ್ಬನನ್ನು ಗ್ರಾಹಕರ ಸೊಗಿನಲ್ಲಿ ಬಂದ ಆರು ಜನ ಮಹಿಳೆಯರ ಗ್ಯಾಂಗ್​ವೊಂದು ಅಂಗಡಿಯಲ್ಲಿ ಬಟ್ಟೆ ಕಳ್ಳತನ ಮಾಡಿದ ಘಟನೆ ಬೀದರ್​ನಲ್ಲಿ ಬೆಳಕಿಗೆ ಬಂದಿದೆ.

ಅಂಗಡಿ ಮಾಲೀಕನ ದಿಕ್ಕು ತಪ್ಪಿಸಿ ಕಳ್ಳತನ ಮಾಡಿದ ಕಳ್ಳಿಯರ್ ಗ್ಯಾಂಗ್!

ಜಿಲ್ಲೆಯ ಭಾಲ್ಕಿ ಪಟ್ಟಣದ ಬುದ್ಧ ವಿಹಾರ ಕಾಂಪ್ಲೆಕ್ಸ್​​ನಲ್ಲಿ ಇರುವ ಪ್ರೇಮ ಡ್ರೇಸೆಸ್ ಎಂಬ ಅಂಗಡಿಯಲ್ಲಿ ಮೊದಲು ಒಬ್ಬ ಮಹಿಳೆ ಬಂದು ಪ್ಯಾಂಟ್ ಶರ್ಟ್ ಖರೀದಿಸಲು ಮುಂದಾಗ್ತಾಳೆ. ಆಮೇಲೆ ಐದು ಜನ ಕಳ್ಳಿಯರು ಅಂಗಡಿಗೆ ನುಗ್ಗಿ ಮಾಲೀಕನ ದಿಕ್ಕು ಮತ್ತೊಂದೆಡೆಗೆ ಸೆಳೆದು ಅಂಗಡಿಯಲ್ಲಿದ್ದ ಬಟ್ಟೆಗಳನ್ನು ವ್ಯವಸ್ಥಿತವಾಗಿ ಕಳ್ಳತನ ಮಾಡಿದ್ದಾರೆ‌.

ಈ ಕಳ್ಳಿಯರ ಕೈ ಚಳಕ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಭೇಟಿ ನೀಡಿದ ಟೌನ್ ಪೊಲೀಸರು ತನಿಖೆ ನಡೆಸಿ ಕಳ್ಳಿಯರನ್ನು ಪತ್ತೆ ಹಚ್ಚಿದ್ದಾರೆ. ಈ ಎಲ್ಲ ಕಳ್ಳಿಯರು ಭಾಲ್ಕಿ ತಾಲೂಕಿನ ನಗರಭವನ ಧನ್ನೂರ ತಾಂಡದವರಾಗಿದ್ದು, ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

Last Updated : Dec 27, 2019, 9:26 PM IST

ABOUT THE AUTHOR

...view details