ಕರ್ನಾಟಕ

karnataka

ETV Bharat / state

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೀದರ್ ಜಿಲ್ಲೆಯ 8 ಗ್ರಾಮ ಪಂಚಾಯತ್​​ಗಳ ಆಯ್ಕೆ ಅಂತಿಮ - bidar latest news

ಔರಾದ್ ತಾಲೂಕಿನ ಜೋಜನಾ ಗ್ರಾಮ ಪಂಚಾಯತ್​​, ಬಸವಕಲ್ಯಾಣದ ಮಂಠಾಳ, ಭಾಲ್ಕಿಯ ಮೇಹಕರ, ಬೀದರ್​ನ ಅಲಿಯಂಬರ್, ಹುಮನಾಬಾದ್​ನ ಘೋಡವಾಡಿ, ಚಿಟಗುಪ್ಪದ ಉಡಬಾಳ, ಹುಲಸೂರು ತಾಲೂಕಿನ ಹುಲಸೂರು ಹಾಗೂ ಕಮಲನಗರದ ಚಿಮ್ಮೆಗಾಂವ್ ಗ್ರಾಮ ಪಂಚಾಯತ್​​ಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

The selection of 8 panchayats in Bidar district for the Gandhi Grama Puraskar
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೀದರ್ ಜಿಲ್ಲೆಯ 8 ಪಂಚಾಯತ್​​ಗಳ ಆಯ್ಕೆ ಅಂತಿಮ

By

Published : Oct 4, 2020, 6:59 AM IST

ಬೀದರ್: 2019-2020 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಿಲ್ಲೆಯ 8 ಮಾದರಿ ಗ್ರಾಮ ಪಂಚಾಯತ್​​ಗಳನ್ನು ಆಯ್ಕೆ ಮಾಡಿ ಅಂತಿಮಗೊಳಿಸಲಾಗಿದೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮಗಳ ಆಯ್ಕೆ ಪಟ್ಟಿ

ಈ ಕುರಿತು ಜಿಲ್ಲಾ ಪಂಚಾಯತ್​​ ಸಿಇಓ ಅವರು ಪಂಚಾಯತ್​ ರಾಜ್​ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಅಂತಿಮ ಪಟ್ಟಿಯಲ್ಲಿ, ಜಿಲ್ಲೆಯ ತಾಲೂಕುವಾರು ಸ್ಪರ್ಧೆಯಲ್ಲಿ ಪಾಲ್ಗೊಂಡು ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ್​​ಗಳನ್ನು ಅಂತಿಮಗೊಳಿಸಿದ್ದಾರೆ.

ಔರಾದ್ ತಾಲೂಕಿನ ಜೋಜನಾ ಗ್ರಾಮ ಪಂಚಾಯತ್​​, ಬಸವಕಲ್ಯಾಣದ ಮಂಠಾಳ, ಭಾಲ್ಕಿಯ ಮೇಹಕರ, ಬೀದರ್​ನ ಅಲಿಯಂಬರ್, ಹುಮನಾಬಾದ್​ನ ಘೋಡವಾಡಿ, ಚಿಟಗುಪ್ಪದ ಉಡಬಾಳ, ಹುಲಸೂರು ತಾಲೂಕಿನ ಹುಲಸೂರು ಹಾಗೂ ಕಮಲನಗರದ ಚಿಮ್ಮೆಗಾಂವ್ ಗ್ರಾಮ ಪಂಚಾಯತ್​​ಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ABOUT THE AUTHOR

...view details