ಬಸವಕಲ್ಯಾಣ:ಕಳ್ಳತನ ಮಾಡಿದ ಬೈಕ್ಅನ್ನು ಕಳ್ಳರು ಬಾವಿಯಲ್ಲಿ ಬಿಸಾಡಿ ಹೋಗಿರುವ ಘಟನೆ ತಾಲೂಕಿನ ಸಸ್ತಾಪೂರ ಸಮೀಪ ಜರುಗಿದೆ.
ಬಸವಕಲ್ಯಾಣ: ಬೈಕ್ ಕದ್ದು ಈ ಕಳ್ರು ಮಾಡಿದ್ದೇನು ನೋಡಿ! - ಬೈಕ್ ಕದ್ದು ಬಾವಿಯಲ್ಲಿ ಎಸೆದು ಹೋದ ಕಳ್ಳರು
ಕಳೆದ ಕೆಲ ದಿನಗಳ ಹಿಂದೆ ನಗರದಿಂದ ಕಳುವಾಗಿದ್ದ ಈ ಬೈಕ್ ಶುಕ್ರವಾರ ಸಸ್ತಾಪೂರ ಬಾವಿಯಲ್ಲಿ ಪತ್ತೆಯಾಗಿದ್ದು, ಬೈಕ್ ಕಳ್ಳತನ ಮಾಡಿದ ಕಳ್ಳರು ಪೊಲೀಸ್ ತನಿಖೆಗೆ ಹೆದರಿ ಬೈಕ್ಅನ್ನು ಬಾವಿಯಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.

ಬೈಕ್ ಕದ್ದು ಬಾವಿಯಲ್ಲಿ ಎಸೆದು ಹೋದ ಕಳ್ಳರು
ಸಸ್ತಾಪೂರ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ ನೀರಿಲ್ಲದ ಬಾವಿಯೊಂದರಲ್ಲಿ ಬೈಕ್ ಪತ್ತೆಯಾಗಿದ್ದು, ಸುದ್ದಿ ತಿಳಿದ ನಗರ ಠಾಣೆ ಎಎಸ್‌ಐ ರಾಜಣ್ಣ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಬಾವಿಯಿಂದ ಬೈಕ್ ಮೇಲೆತ್ತಿ ವಶಕ್ಕೆ ಪಡೆದಿದೆ.
ಬೈಕ್ ಕದ್ದು ಬಾವಿಯಲ್ಲಿ ಎಸೆದು ಹೋದ ಕಳ್ಳರು
ಕಳೆದ ಕೆಲ ದಿನಗಳ ಹಿಂದೆ ನಗರದಿಂದ ಕಳುವಾಗಿದ್ದ ಈ ಬೈಕ್ ಶುಕ್ರವಾರ ಸಸ್ತಾಪೂರ ಬಾವಿಯಲ್ಲಿ ಪತ್ತೆಯಾಗಿದ್ದು, ಬೈಕ್ ಕಳ್ಳತನ ಮಾಡಿದ ಕಳ್ಳರು ಪೊಲೀಸ್ ತನಿಖೆಗೆ ಹೆದರಿ ಬೈಕ್ಅನ್ನು ಬಾವಿಯಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಬೈಕ್ ವಶಕ್ಕೆ ಪಡೆದ ಪೊಲೀಸರ ತಂಡ ಕಳ್ಳರ ಪತ್ತೆಗಾಗಿ ಬಲೆ ಬೀಸಿದೆ.