ಕರ್ನಾಟಕ

karnataka

ETV Bharat / state

ಸಂಕಷ್ಟದಲ್ಲಿ ಲಾರಿ ಉದ್ಯಮ: ಹಲವು ಬೇಡಿಕೆ ಈಡೇರಿಕೆಗೆ ಪ್ರಧಾನಿಗೆ ಪತ್ರ - ಬಸವಕಲ್ಯಾಣ ಲಾರಿ ಮಾಲೀಕರ ಸಂಘ ಸುದ್ದಿ

ಲಾರಿ ಮಾಲೀಕರ ಸಂಘದಿಂದ ಬುಧವಾರ ಮಿನಿ ವಿಧಾನಸೌಧಕ್ಕೆ ತೆರಳಿ ಹಲವು ಬೇಡಿಕೆಗಳ ಈಡೇರಿಕೆಯ ಕುರಿತು ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಯಿತು.

ಹಲವು ಬೇಡಿಕೆ ಈಡೆರಿಕೆ ಪ್ರಧಾನಿಗೆ ಪತ್ರ
ಹಲವು ಬೇಡಿಕೆ ಈಡೆರಿಕೆ ಪ್ರಧಾನಿಗೆ ಪತ್ರ

By

Published : Jun 11, 2020, 1:03 PM IST

ಬಸವಕಲ್ಯಾಣ: ಲಾಕ್‌ಡೌನ್‌ನಿಂದಾಗಿ ಲಾರಿ ಉದ್ಯಮ ಸಂಕಷ್ಟದಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಲಾರಿ ಮಾಲಿಕರು, ಚಾಲಕರು ಹಾಗೂ ಕ್ಲೀನರ್‌ಗಳ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಮುಂದಾಗಬೇಕು ಎಂದು ಲಾರಿ ಮಾಲೀಕರ ಸಂಘದಿಂದ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

ಹಲವು ಬೇಡಿಕೆಗಳ ಈಡೇರಿಕೆಗೆ ಲಾರಿ ಮಾಲೀಕರ ಸಂಘದಿಂದ ಪ್ರಧಾನಿಗೆ ಪತ್ರ

ಲಾರಿ ಮಾಲೀಕರ ಸಂಘದಿಂದ ಬುಧವಾರ ಮಿನಿ ವಿಧಾನ ಸೌಧಕ್ಕೆ ತೆರಳಿ ಹಲವು ಬೇಡಿಕೆ ಕುರಿತು ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಯಿತು.

ಇದನ್ನೂ ಓದಿ:ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಿದ್ದ 40 ಕೋಟಿ ರೂ. ಬಿಡುಗಡೆ

ಲಾರಿ ಮಾಲೀಕರು ಸಂಕಷ್ಟದಲ್ಲಿದ್ದು, ಡಿಸೆಂಬರ್‌ವರೆಗೆ ತ್ರೈಮಾಸಿಕ ತೆರಿಗೆ ಮನ್ನಾ ಮಾಡಬೇಕು. ಬ್ಯಾಂಕ್ ಮತ್ತು ಫೈನಾನ್ಸ್ ಸಾಲದ ಕಂತು ಕಟ್ಟಲು ಡಿಸೆಂಬರ್‌ವರೆಗೆ ಅವಕಾಶ ಕಲ್ಪಿಸಿ ಬಡ್ಡಿ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು. ಆಲ್ ಇಂಡಿಯಾ ಪರವಾನಗಿ ಡಿಸೆಂಬರ್‌ವರೆಗೆ ವಿಸ್ತರಿಸಬೇಕೆನ್ನುವುದೂ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

ABOUT THE AUTHOR

...view details