ಕರ್ನಾಟಕ

karnataka

ETV Bharat / state

ಜಾತಿ-ಧರ್ಮದ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾದ ಶಿಕ್ಷಕ: ವಿಡಿಯೋ ವೈರಲ್​ - ಮುಖ್ಯಶಿಕ್ಷಕನ ವಿಡಿಯೋ ಸಖತ್ ವೈರಲ್

ಬೀದರ್​ನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಚಂದಾ ಕೇಳಲು ಹೋದ ಯುವಕರಿಗೆ ದೇಶದ ಸಾಮಾಜಿಕ ಸ್ಥಿತಿಯ ಬಗ್ಗೆ ಮಾತನಾಡಿ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದಾರೆ.

ಮುಖ್ಯಶಿಕ್ಷಕ

By

Published : Sep 1, 2019, 5:12 AM IST

ಜಾತಿ-ಧರ್ಮದ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾದ ಶಿಕ್ಷಕ: ವಿಡಿಯೋ ವೈರಲ್​

ಬೀದರ್: ಗಣೇಶ ಹಬ್ಬದ ಪ್ರಯುಕ್ತ ಚಂದಾ ಕೇಳಲು ಹೋದ ಯುವಕರಿಗೆ ಶಿಕ್ಷಕ ಬೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಶಿಕ್ಷಕನ ವಿಡಿಯೋ ಸಖತ್ ವೈರಲ್

ತಾಲೂಕಿನ ಕಾಡವಾದ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಟಿ.ಆರ್ ದೊಡ್ಡಿ ಬಳಿ ಯುವಕರು ಚಂದಾ ಕೇಳಲು ಹೋಗಿದ್ದಾರೆ. ಈ ವೇಳೆ ಜಾತಿ-ಧರ್ಮದ ಹಾಗೂ ಪ್ರಸ್ತುತ ರಾಜಕೀಯದ ಬಗ್ಗೆ ಶಿಕ್ಷಕ ದೊಡ್ಡಿ ಯುವಕರಿಗೆ ತಿಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಯುವಕನೋರ್ವ ದೃಶ್ಯ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.

ಗಣೇಶ ಹಬ್ಬದ ಸಂಭ್ರಮ ಎಂಬುದೆಲ್ಲಾಒಂದು ರೀತಿಯ ಪಿತೂರಿ. ಒಂದೇ ಸಮುದಾಯ ಅಧಿಕಾರದಲ್ಲಿರಲು ಇಂತಹ ಹಬ್ಬ ಆಚರಣೆಗಳನ್ನು ಜಾರಿಗೆ ತರಲಾಯಿತು ಎಂದು ದೇವರ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details