ಬೀದರ್: ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಅಂಗವಾಗಿ 45 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 37 ಜನರಿಗೆ ಡಾಕ್ಟರೇಟ್ ಪದವಿ ವಿತರಿಸಲಾಯಿತು.
ಪಶು ವಿ.ವಿಯ 11ನೇ ಘಟಿಕೋತ್ಸವ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ವಿತರಣೆ
ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಅಂಗವಾಗಿ, 45 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 37 ಜನರಿಗೆ ಡಾಕ್ಟರೇಟ್ ಪದವಿ ವಿತರಿಸಲಾಯಿತು.
ನಗರದ ಕಮಠಾಣ ರಸ್ತೆಯಲ್ಲಿರುವ ನಂದಿ ನಗರದಲ್ಲಿನ ಕ್ಯಾಂಪಸ್ನಲ್ಲಿ ನಡೆದ ಸಮಾರಂಭದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಕೇಂದ್ರ ಪಶು ಸಂಗೋಪನಾ ನಿರ್ದೇಶಕ ಅಶೋಕ್ ದಳವಾಯಿ, ಪಶು ವಿವಿ ಕುಲಪತಿ ಪ್ರೊ.ಹೆಚ್.ಡಿ. ನಾರಾಯಣಸ್ವಾಮಿ ಒಟ್ಟು 37ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಹಾಗೂ 45 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 662 ವಿದ್ಯಾರ್ಥಿಗಳಿಗೆ ಪದವಿ, 122 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ, ಸೇರಿದಂತೆ 2017ನೇ ಸಾಲಿನ 44 ಹಾಗೂ 2018 ನೇ ಸಾಲಿನ 68 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಈ ಸಾಲಿನ ಘಟಿಕೋತ್ಸವದಲ್ಲಿ ಬೆಂಗಳೂರಿನ ವಿಶ್ವಾಸ್ ಎಂಬ ವಿದ್ಯಾರ್ಥಿ ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಒಟ್ಟು 10 ಚಿನ್ನದ ಪದಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು.