ಬೀದರ್:ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ನನ್ನನ್ನು ಕಂಡ್ರೆ ಸಾಕು ಕನ್ನಡದಲ್ಲೆ ಮಾತನಾಡುತ್ತಿದ್ದರು. ಅವರು ನಮ್ಮಿಂದ ಅಗಲಿರುವುದು ತುಂಬಾ ಆಘಾತ ತಂದಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೌಫೋದ್ದಿನ್ ಕಚೇರಿವಾಲಾ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಷ್ಮಾ ಸ್ವರಾಜ್ ನನ್ನೊಂದಿಗೆ ಕನ್ನಡದಲ್ಲೆ ಮಾತಾಡ್ತಿದ್ದರು: ಕಚೇರಿವಾಲಾ!
ಅಡ್ವಾಣಿ ಅವರು ರಥ ಯಾತ್ರೆ ಆರಂಭಿಸಿದಾಗ ಮತ್ತು ಬಳ್ಳಾರಿ ಲೋಕಸಭೆ ಚುನಾವಣೆ ವೇಳೆಯಲ್ಲಿ ಸುಷ್ಮಾ ಸ್ವರಾಜ್ ಅವರು ಬೀದರ್ಗೆ ಬಂದು ಪಕ್ಷದ ಸಂಘಟನೆ ಮಾಡಿದ್ದರು. ಅವರು ನೀಡಿದ ಉಪದೇಶಗಳು ನಮ್ಮ ರಾಜಕೀಯ ಜೀವನ ಸುಧಾರಿಸಿಕೊಳ್ಳಲು ದಾರಿಯಾಯಿತು. ಈಗ ಅವರು ಇಲ್ಲದಿರುವುದು ತುಂಬಾ ನೋವು ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕಚೇರಿವಾಲಾ ಶೋಕ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆಗೆ ಒಟ್ಟು ಮೂರು ಬಾರಿ ಬಂದಿದ್ದ ಸುಷ್ಮಾ ಅವರು ದೆಹಲಿಯಲ್ಲಿ ನಡೆದ ಅಲ್ಪಸಂಖ್ಯಾತ ಸಮಾವೇಶದಲ್ಲಿ ನನ್ನೊಂದಿಗೆ ಮಾತನಾಡುವಾಗ ಏನ್ರೀ ಕಚೇರಿವಾಲಾ, ಊಟ ಆಯ್ತಾ ಎಂದು ಅಮ್ಮನಂತೆ ಮೃದುವಾಗಿ ಕೇಳಿದ್ದರು. ಸಂಸದ ಭಗವಂತ ಖೂಬಾ, ಬಸವರಾಜ ಆರ್ಯರೊಂದಿಗೆ ಗೋವಾಗೆ ಹೋದಾಗಲೂ ಸಹ ಹಾಗೇಯೇ ಕೇಳಿದ್ದರು. ಅವರು ತೋರುವ ಮಮತೆ ಮತ್ತು ಆದರ್ಶ ಮಾತ್ರ ನನ್ನ ಜೀವನದಲ್ಲಿ ಮರೆಯಲಾಗದು ಎಂದು ಕಚೇರಿವಾಲಾ ನೆನಪಿಸಿಕೊಂಡರು.