ಬಸವಕಲ್ಯಾಣ: ಇಂದು ಸಂಡೇ ಲಾಕ್ಡೌನ್ಗೆ ತಾಲೂಕಿದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಅಂಗಡಿ-ಮುಂಗಟ್ಟು ತೆರೆಯದ ಕಾರಣ ನಗರ ಸಂಪೂರ್ಣ ಸ್ತಬ್ದವಾಗಿತ್ತು.
ಸಂಡೇ ಲಾಕ್‌ಡೌನ್: ಬಸವಕಲ್ಯಾಣದಲ್ಲಿ ಬಂದ್ ಬಹುತೇಕ ಯಶಸ್ವಿ - ಬೀದರ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸಂಡೇ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದಲೇ ಅಂಗಡಿ-ಮುಂಗಟ್ಟು ತೆರೆಯದ ಕಾರಣ ನಗರ ಸಂಪೂರ್ಣ ಸ್ತಬ್ದವಾಗಿತ್ತು.
ಬಸವಕಲ್ಯಾಣದಲ್ಲಿ ಬಂದ್ ಬಹುತೇಕ ಯಶಸ್ವಿ
ಆಸ್ಪತ್ರೆ, ಮೆಡಿಕಲ್ ಶಾಪ್ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಬಂದ್ ಆಗಿದ್ದವು. ಅಗತ್ಯ ಕೆಲಸಗಳಿಗಾಗಿ ಕೆಲವರು ಬೈಕ್ನಲ್ಲಿ ಓಡಾಡುವದನ್ನು ಬಿಟ್ಟರೆ ಮುಖ್ಯ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು.
ಬೆಳಗ್ಗೆ 6 ರಿಂದಲೇ ಪೊಲೀಸರು ನಗರದ ಆಯ್ದ ಸ್ಥಳಗಳಲ್ಲಿ ಬೈಕ್‌ಗಳನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಕೆಲವೆಡೆ ರಸ್ತೆಯಲ್ಲಿ ಅನಗತ್ಯ ಜನ ಸಂಚಾರ ಕಂಡು ಬರುತಿತ್ತು. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಲಾಕ್ಡೌನ್ಗೆ ಬೆಂಬಲ ವ್ಯಕ್ತವಾಗಿದೆ.