ಬೀದರ್: ಸಾಲ ಬಾಧೆಯಿಂದ ಬೇಸತ್ತ ರೈತ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವಕಲ್ಯಾಣ ತಾಲೂಕಿನ ಮುಡಬಿವಾಡಿಯಲ್ಲಿ ನಡೆದಿದೆ.
ಬಸವಕಲ್ಯಾಣದಲ್ಲಿ ಸಾಲಬಾಧೆಯಿಂದ ರೈತ ನೇಣಿಗೆ ಶರಣು - ಬೀದರ್ನಲ್ಲಿ ರೈತ ನೇಣಿಗೆ ಶರಣು
ರಾಜ್ಯದಲ್ಲಿ ರೈತರ ಆತ್ಮಹತ್ಯಾ ಸರಣಿ ಮುಂದುವರೆದಿದ್ದು, ಮತ್ತೆ ಬೀದರ್ ಜಿಲ್ಲೆಯಲ್ಲಿ ಸಾಲಬಾಧೆ ತಾಳದೆ ರೈತನೊಬ್ಬ ನೇಣಿಗೆ ಶರಣಾಗಿದ್ದಾನೆ.
ರೈತ ನೇಣಿಗೆ ಶರಣು
ಗ್ರಾಮದ ಅಂಬಣ್ಣ ಹಣಮಂತಪ್ಪ ಗಡಮಿದೆ (65) ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿ ಕೆಲಸಕ್ಕೆ ಎಂದು ಮಧ್ಯಾಹ್ನ 2ರ ಸುಮಾರಿಗೆ ತನ್ನ ಜಮೀನಿಗೆ ತೆರಳಿದ ರೈತ ಅಂಬಣ್ಣ, ಸಂಜೆ 5ರ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಡಬಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಖಾಸಗಿ ವಲಯದಲ್ಲಿ 2.50 ಲಕ್ಷಕ್ಕೂ ಅಧಿಕ ಸಾಲ ಹೊಂದಿದ್ದ ಈತ, ಸಾಲ ತೀರಿಸಲು ಸಾಧ್ಯವಾಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮುಡಬಿ ಠಾಣೆ ಪೊಲೀಸರ ತಂಡ ತನಿಖೆ ಮುಂದುವರೆಸಿದೆ.
Last Updated : Oct 17, 2019, 8:26 AM IST