ಕರ್ನಾಟಕ

karnataka

ETV Bharat / state

ಬೀದರ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ 10 ಎಕರೆ ಕಬ್ಬು ಬೆಂಕಿಗಾಹುತಿ

ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಕಟಾವು ಹಂತಕ್ಕೆ ಬಂದಿದ್ದ 10 ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ.

sugarcane-destroyed-due-to-electricity-short-circuit
ಬೀದರ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ 10 ಎಕರೆ ಕಬ್ಬು ಬೆಂಕಿಗಾಹುತಿ

By

Published : Nov 25, 2022, 8:03 PM IST

ಬೀದರ್:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಕಟಾವು ಹಂತಕ್ಕೆ ಬಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಬೆಂಕಿಗಾಹುತಿಯಾಗಿದೆ. ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು 10 ಎಕರೆಯಲ್ಲಿ ಬೆಳೆದಿದ್ದ 12 ಲಕ್ಷದಿಂದ 15 ಲಕ್ಷದ ರೂಪಾಯಿ ಮೌಲ್ಯದ ಕಬ್ಬು ನಾಶವಾಗಿದೆ.

ಬೀದರ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ 10 ಎಕರೆ ಕಬ್ಬು ಬೆಂಕಿಗಾಹುತಿ

ಬಾಬು ಶೆಟ್ಟಿ ಪಾಟೀಲ್ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದರಾದರೂ ಅವರು ಬರುವ ಮುನ್ನವೇ ಕಬ್ಬು ಬೆಂಕಿ ಗಾಹುತಿಯಾಗಿತ್ತು. ಕಬ್ಬು ಸುಟ್ಟಿದ್ದಲ್ಲದೇ, ಹನಿ ನೀರಾವರಿ, ಪೈಪ್ ಲೈನ್ ಸೇರಿದಂತೆ ರೈತರ ಕೃಷಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಈ ಸಂಬಂಧ ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮೇಯಲು ಬಂದಿದ್ದ ಕುರಿ ಮೇಲೆ ಹೆಬ್ಬಾವು ದಾಳಿ: ಇಲ್ಲಿದೆ ವಿಡಿಯೋ

ABOUT THE AUTHOR

...view details