ಬೀದರ್: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು,ಬಿಜೆಪಿಯ ಭಗವಂತ ಖೂಬಾ ಹಾಗೂ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಸೇರಿದಂತೆ ಕಣದಲ್ಲಿರುವ 22 ಅಭ್ಯರ್ಥಿಗಳ ಭವಿಷ್ಯ ನಾಳೆ ಬಯಲಾಗಲಿದೆ.
ಬೀದರ್ ಲೋಕಸಭೆ:ಮಹಾಸಮರದ ರಿಸಲ್ಟ್ ಕೊಡಲು ಜಿಲ್ಲಾಡಳಿತ ಸಿದ್ಧ - ಫಲಿತಾಂಶ
14 ಕೊಠಡಿಗಳಲ್ಲಿ ತಲಾ 14 ಟೇಬಲ್ಗಳಲ್ಲಿ 1,600 ಜನ ಅಧಿಕಾರಿಗಳಿಂದ ಮತ ಎಣಿಕಾ ಕಾರ್ಯ ನಡೆಯಲಿದೆ. ಅಲ್ಲದೇ ಅಂಚೆ ಮತಗಳ ಎಣಿಕೆ ಈ ಬಾರಿ ಪ್ರತ್ಯೇಕ ಕೊಠಡಿಯಲ್ಲಿ ನಡೆಯಲಿದ್ದು, ಅದಕ್ಕೆ 5 ಜನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮತ ಎಣಿಕೆಗೆ ಬೀದರ್ ಜಿಲ್ಲಾಡಳಿತದಿಂದ ಭರದ ಸಿದ್ಧತೆ
ನಗರದ ಬಿ.ವಿ ಭೂಮರೆಡ್ಡಿ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆದಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ 11,13,312 ಮತಗಳು ಸೇರಿದಂತೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 400 ಪೊಲೀಸರ ತಂಡ ಕೆಲಸ ಮಾಡಲಿದ್ದು,ಪಾಸ್ ರಹಿತ ಪ್ರವೇಶಕ್ಕೆ ಕಡ್ಡಾಯ ನಿಷೇಧ ಹೇರಲಾಗಿದೆ.