ಕರ್ನಾಟಕ

karnataka

ETV Bharat / state

ಬಿರುಗಾಳಿ ಸಹಿತ ಮಳೆ: ಬೀದರ್​​ನಲ್ಲಿ ಕಂಗಾಲಾದ ರೈತ - ಬೀದರ್​ ಜಿಲ್ಲೆಯಲ್ಲಿ ಸುರಿದ ಗುಡುಗು ಮಿಶ್ರಿತ ಮಳೆ

ಬೀದರ್​ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

Storm mixed premature rain inn Bidar
ಬಿರುಗಾಳಿ ಮಿಶ್ರಿತ ಅಕಾಲಿಕ ಮಳೆ.

By

Published : Apr 21, 2020, 3:54 PM IST

ಬೀದರ್:ರಾತ್ರಿ ಸುರಿದ ಧಾರಾಕಾರ ಬಿರುಗಾಳಿ ಸಹಿತ ಮಳೆಯಿಂದಾಗಿ ಜಿಲ್ಲೆಯ ಬೆನಕನಳ್ಳಿ, ಮಾಮನಕೇರಿ, ಚಾಂಬೋಳ, ಫತ್ತೆಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ತಂತಿಗಳೆಲ್ಲವೂ ಧ್ವಂಸಗೊಂಡು ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿತ್ತು.

ಬಿರುಗಾಳಿ ಸಹಿತ ಮಳೆ
ಬೆನಕನಳ್ಳಿ ಗ್ರಾಮದಲ್ಲಿ ಮನೆ ಮೇಲಿನ ತಗಡಿನ ಶೆಡ್​​ಗಳು ಗಾಳಿಗೆ ಹಾರಿ ಹೋಗಿದ್ದಲ್ಲದೆ, ಗೋಡೆಗಳು ಕೂಡ ಕುಸಿದಿವೆ. ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರ ಜಖಂಗೊಂಡಿವೆ. ರೈತನೊಬ್ಬನ ತೋಟದಲ್ಲಿ ಬೆಳೆಯಲಾಗಿದ್ದ ಮಾವುಗಳು ನೆಲಕ್ಕೆ ಬಿದ್ದು ನಾಶವಾಗಿವೆ. ಸೋಮವಾರ ಸಂಜೆ ಒಂದು ಗಂಟೆ ಕಾಲ ಸುರಿದ ಮಳೆಯ ಆರ್ಭಟಕ್ಕೆ ಜನರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

ABOUT THE AUTHOR

...view details