ಕರ್ನಾಟಕ

karnataka

ETV Bharat / state

ಲೋಕ ಕಲ್ಯಾಣಕ್ಕಾಗಿ ವಿಘ್ನ ವಿನಾಯಕನ ಸನ್ನಿಧಿಯಲ್ಲಿ ಬಾಲ ಸಪ್ತಾಹ

ಪ್ರಕೃತಿ ವಿಕೋಪಕ್ಕೆ ಮನುಕುಲವೆ ಸಂಕಟಕ್ಕೆ ಸಿಲುಕಿರುವುದಕ್ಕೆ ಲೋಕ ಕಲ್ಯಾಣಕ್ಕಾಗಿ ವಿಘ್ನ ವಿನಾಯಕನ ಸನ್ನಿಧಿಯಲ್ಲಿ ಬಾಲ ಸಪ್ತಾಹ ನಡೆಸಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಎಕಂಬಾ ಗ್ರಾಮದ ಗ್ರಾಮಸ್ಥರು ಆರಾಧನೆ ಮಾಡ್ತಿದ್ದಾರೆ.

ವಿನಾಯಕನ ಸನ್ನಿಧಿಯಲ್ಲಿ ಬಾಲ ಸಪ್ತಾಹ

By

Published : Sep 8, 2019, 5:53 PM IST

ಬೀದರ್:ಒಂದು ಕಡೆ ನೆರೆ ಮತ್ತೊಂದು ಕಡೆ ಬರ ಹೀಗೆ ಪ್ರಕೃತಿ ವಿಕೋಪಕ್ಕೆ ಮನುಕುಲವೆ ಸಂಕಟಕ್ಕೆ ಸಿಲುಕಿರುವುದಕ್ಕೆ ಲೋಕ ಕಲ್ಯಾಣಕ್ಕಾಗಿ ವಿಘ್ನ ವಿನಾಯಕನ ಸನ್ನಿಧಿಯಲ್ಲಿ ಬಾಲ ಸಪ್ತಾಹ ನಡೆಸಿ ಇಲ್ಲೊಂದು ಗ್ರಾಮಸ್ಥರು ಆರಾಧನೆ ಮಾಡ್ತಿದ್ದಾರೆ.

ಲೋಕ ಕಲ್ಯಾಣಕ್ಕಾಗಿ ವಿಘ್ನ ವಿನಾಯಕನ ಸನ್ನಿಧಿಯಲ್ಲಿ ಬಾಲ ಸಪ್ತಾಹ

ಜಿಲ್ಲೆಯ ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿ ಈ ಬಾರಿ ಗ್ರಾಮಸ್ಥರು ಮುನಿಸಿಕೊಂಡ ದೇವರ ಆರಾಧನೆ ಮಾಡುವ ಮೂಲಕ ಗಣೇಶ ಹಬ್ಬ ಆಚರಣೆ ವಿಶೇಷವಾಗಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನೆರೆ ಬಂದು ಅದೆಷ್ಟೋ ಕುಟುಂಬಗಳು ಬೀದಿ ಪಾಲಾದ್ರೆ, ಮತ್ತೊಂದು ಕಡೆ ಮಳೆ ಇಲ್ಲದೆ ಜನ ಜಾನುವಾರುಗಳು ನೀರಿಗಾಗಿ ಪರಿತಪಿಸುವಂತಹ ವಿಚಿತ್ರ ಪ್ರಕೃತಿ ವಿಕೋಪ ಬಂದಿರುವುದಕ್ಕೆ ಈ ಗ್ರಾಮಸ್ಥರು ದೈವ ಸನ್ನಿಧಿಯಲ್ಲಿ ಸತತ ಏಳು ದಿನಗಳ ಕಾಲ ನಿರಂತರ ಭಜನೆ ಹಾಗೂ ಜಾಗರಣೆ ಮಾಡುತ್ತಿದ್ದಾರೆ.

ಎಕಂಬಾ ಗ್ರಾಮದ ಯುವಕರ ತಂಡ ಪ್ರತಿ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂಭ್ರಮಿಸುತ್ತದೆ. ಆದ್ರೆ ಈ ಬಾರಿ ಗಣೇಶನ ಚಂದಾದಲ್ಲಿನ ಶೇ. 50ರಷ್ಟು ಭಾಗ ನೆರೆ ಪೀಡಿತ ಪ್ರದೇಶದ ಸಹಾಯಕ್ಕೆ ಬಳಸಿಕೊಂಡಿದ್ದಲ್ಲದೆ, ದೈವಾರಾಧನೆ ಮಾಡಿ ಲೋಕ ಕಲ್ಯಾಣದ ವಿಶೇಷ ಚಿಂತನೆ ಇಟ್ಟುಕೊಂಡು ಹಬ್ಬ ಆಚರಿಸುತ್ತಿದ್ದೇವೆ ಎಂದು ಸ್ಥಳೀಯ ಸ್ವಾಮಿಗಳು ತಿಳಿಸಿದರು.

ABOUT THE AUTHOR

...view details