ಬೀದರ್ : ಶ್ರಾವಣ ಮಾಸದ ಪವಿತ್ರ ಸೋಮವಾರದ ಇಂದು, ಜಿಲ್ಲೆಯ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸಾಮಾಜಿಕ ಅಂತರ ಮರೆತು ದರ್ಶನಕ್ಕೆ ಮುಗಿಬಿದ್ದಿದ್ದು ಕಂಡು ಬಂತು.
ಸಾಮಾಜಿಕ ಅಂತರ ಮರೆತು ದೇವರ ದರ್ಶನಕ್ಕೆ ಮುಗಿಬಿದ್ದ ಜನ
ಬೀದರ್ ಜಿಲ್ಲೆಯ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನಲ್ಲಿ ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ಸಾಮಾಜಿಕ ಅಂತರದ ನಿಯಮ ಮರೆತು ಗುಂಪು ಸೇರಿದ್ದು ಕಂಡು ಬಂತು.
ಸಾಮಾಜಿಕ ಅಂತರ ಮರೆತು ದೇವರ ದರ್ಶನಕ್ಕೆ ಮುಗಿಬಿದ್ದ ಜನ
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಜನ ಮಾತ್ರ ಆ ಬಗ್ಗೆ ನಿರ್ಲಕ್ಷ್ಯ ವಹಿಸಿ ಗುಂಪು ಸೇರಿದ್ದರು. ಅನೇಕರು ಮಾಸ್ಕ್ ಕೂಡ ಧರಿಸಿರಲಿಲ್ಲ. ಕೆಲವರು ಸರತಿ ಸಾಲಿನಲ್ಲಿ ನಿಂತಿದ್ದರೂ ನಡುವೆ ಅಂತರವಿರಲಿಲ್ಲ.
ದೇವಸ್ಥಾನ ಮುಂಭಾಗದಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳು ಮತ್ತು ದೇವಸ್ಥಾನಕ್ಕೆ ಆಗಮಿಸುವಾಗ ಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ದೊಡ್ಡದಾದ ಬ್ಯಾನರ್ ಅಳವಡಿಸಲಾಗಿದೆ. ಆದರೆ, ಜನ ಮಾತ್ರ ಅದನ್ನು ನೋಡಿಯೂ ನೋಡದಂತೆ ವರ್ತಿಸಿ ಬ್ಯಾನರ್ ಕೆಳಗೆಯೇ ಗುಂಪು ಸೇರಿದ್ದರು.