ಕರ್ನಾಟಕ

karnataka

ETV Bharat / state

ವಿದೇಶದಿಂದ ಸ್ವಗ್ರಾಮಕ್ಕೆ ವಾಪಸ್ಸಾದ ಯುವಕ ಹಾವು ಕಡಿದು ಸಾವು - ಹಾವು ಕಡಿದು ಯುವಕ ಸಾವು

ವಿದೇಶದಿಂದ ವಾಪಸ್​ ಆಗಿದ್ದ ಯುವಕನಿಗೆ ವಿಷ ಸರ್ಪ ಕಚ್ಚಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

snake bite
snake bite

By

Published : Sep 18, 2020, 2:15 AM IST

ಬೀದರ್: ವಿಧಿಯಾಟ ಹೇಗಿದೆ ನೋಡಿ, ಲಾಕ್​ಡೌನ್ ವೇಳೆಯಲ್ಲಿ ವಿದೇಶದಲ್ಲಿ ಸಿಲುಕಿ ಸಾಕಷ್ಟು ಸಂಕಷ್ಟ ಅನುಭವಿಸಿ ವಿದೇಶದಿಂದ ಸ್ವಗ್ರಾಮಕ್ಕೆ ವಾಪಸ್ಸಾದ ಯುವಕನೊಬ್ಬ ಹಾವು ಕಡಿದು ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.

ಹಾವು ಕಡಿದು ಸಾವನ್ನಪ್ಪಿದ ಯುವಕ

ಜಿಲ್ಲೆಯ ಹುಮನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮದ ಸತ್ತಾರ(32) ಎಂಬ ಯುವಕನಿಗೆ ಮನೆಯಲ್ಲೇ ವಿಷ ಸರ್ಪ ಕಡಿದು ಚಿಕಿತ್ಸೆ ಪಡೆಯುವ ಮೊದಲೇ ಕೊನೆಯುಸಿರೆಳೆದಿದ್ದಾನೆ.

ಯುವಕನಿಗೆ ಕಡಿದ ಹಾವು

ಸೌದಿ ಅರೇಬಿಯಾದ ಕುವೈತ್​ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಕೊರೊನಾ ಸಂದರ್ಭದಲ್ಲಿ ಲಾಕ್​ಡೌನ್​ ಹೇರಿದ ಕಾರಣ ಊಟಕ್ಕೂ ಗತಿ ಇಲ್ಲದೆ ಸಾವಿನ ಸಂಕಷ್ಟದಿಂದ ಪಾರಾಗಿ, ಬದುಕಿತು ಬಡ ಜೀವ ಎಂದು ಮನೆಗೆ ಬಂದು ಸೇರಿದ್ದನು. ಆದರೆ ಸ್ವಗ್ರಾಮಕ್ಕೆ ಬಂದು ಎರಡು ವಾರದಲ್ಲೇ ಮನೆಯಲ್ಲಿ ವಿಷ ಸರ್ಪ ಕಡಿದು ಸಾವನಪ್ಪಿರುವುದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ.

ABOUT THE AUTHOR

...view details