ಬಸವಕಲ್ಯಾಣ: ಕೃಷಿ ಚಟುವಟಿಕೆಯಲ್ಲಿ ನಿರತವಾಗಿದ್ದ ಮಹಿಳೆಗೆ ಹಾವು ಕಡಿದು ಮೃತಪಟ್ಟ ಘಟನೆ ತಾಲೂಕಿನ ಧನ್ನೂರ (ಆರ್) ಗ್ರಾಮದಲ್ಲಿ ನಡೆದಿದೆ.
ಬಸವಕಲ್ಯಾಣದಲ್ಲಿ ಹಾವು ಕಡಿದು ಮಹಿಳೆ ಸಾವು - ನಾಟಿ ವೈದ್ಯರಿಂದ ಔಷಧಿ
ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಹಾವು ಕಡಿದ ಪರಿಣಾಮ ತೀವ್ರ ಅಸ್ವಸ್ಥರಾದ ಮಹಿಳೆಗೆ ನಾಟಿ ವೈದ್ಯರಿಂದ ಔಷಧಿ ಕೊಡಿಸಲಾಗಿತ್ತು. ಆದರೆ ಔಷಧ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.
ಮಹಿಳೆ ಸಾವು
ಗ್ರಾಮದ ಜಗದೇವಿ ಭಾಬುರಾವ ಕೊಟೆಕರ್ (60) ಮೃತ ಮಹಿಳೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಹಾವು ಕಡಿದಿದೆ. ಪರಿಣಾಮ ತೀವ್ರ ಅಸ್ವಸ್ಥರಾದ ಮಹಿಳೆಗೆ ನಾಟಿ ವೈದ್ಯರಿಂದ ಔಷಧ ಕೊಡಿಸಲಾಗಿತ್ತು. ಆದರೆ ಔಷಧಿ ಫಲಕಾರಿಯಾಗದ ಕಾರಣ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.