ಕರ್ನಾಟಕ

karnataka

ETV Bharat / state

ಅಯ್ಯೋ ದುರ್ವಿಧಿಯೇ... ಮನೆ ಮೇಲ್ಛಾವಣಿ ಕುಸಿದು ಬೀದರ್​ನಲ್ಲಿ ಒಂದೇ ಕುಟುಂಬದ ಆರು ಜನ ಸಾವು - kannada nes,etv bharat,Six , same family, died, house roof collapse,ಮನೆಯ ಮೆಲ್ಛಾವಣಿ ಕುಸಿತ, ಒಂದೇ ಕುಟುಂಬ, ಆರು ಜನರ ಸಾವು,

ಇಂದು ನಸುಕಿನ ಜಾವ ಬೀದರ್​ ಜಿಲ್ಲೆಯಲ್ಲಿ ಭಾರಿ ದುರಂತ ಸಂಭವಿಸಿದೆ. ದಿಢೀರ್​​ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಗಾಢ ನಿದ್ರೆಯಲ್ಲಿದ್ದ ಒಂದೇ ಕುಟುಂಬದ ಆರು ಜನ ಮೃತಪಟ್ಟಿದ್ದಾರೆ.

ಒಂದೇ ಕುಟುಂಬದ ಆರು ಜನರ ದಾರುಣ ಸಾವು

By

Published : Jun 26, 2019, 11:11 AM IST

Updated : Jun 26, 2019, 12:50 PM IST

ಬೀದರ್: ಮನೆಯ ಮಾಳಿಗೆ ಕುಸಿದ ಪರಿಣಾಮ ಒಂದೇ ಕುಟುಂಬದ ಆರು ಜನ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ನಗರದ ಚಿಲ್ಲಾ ಬಡಾವಣೆಯಲ್ಲಿ ನಡೆದಿದೆ.

ಇಂದು ನಸುಕಿನಜಾವ ದಿಢೀರ್​ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಗಾಢ ನಿದ್ರೆಯಲ್ಲಿದ್ದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಳೆ ಮನೆಯೊಂದರ ಮಣ್ಣಿನ ಮಾಳಿಗೆ ಕುಸಿದು ಈ ದುರಂತ ಸಂಭವಿಸಿದೆ. ನದೀಮ್ ಶೇಕ್ ಯುಸೂಬ್ ಶೇಕ್ (45), ಇವರ ಪತ್ನಿ ಫರೀದಾ ಬೇಗ್ಂ (34), ಮಕ್ಕಳಾದ ಆಯುಷಾ ಬಾನು (15), ಮೇಹತಾಬಿ (14), ಫಜಾನಲಿ (09) ಹಾಗೂ ಫರಾನ್​ ಅಲಿ (05) ದುರಂತದಲ್ಲಿ ಮೃತಪಟ್ಟವರು.

ಒಂದೇ ಕುಟುಂಬದ ಆರು ಜನರ ದಾರುಣ ಸಾವು

ಸ್ಥಳಕ್ಕೆ ಪೊಲೀಸರು, ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯಿಂದ ಬಡಾವಣೆಯಲ್ಲಿ ನೀರವ ಮೌನ ಆವರಿಸಿದೆ.

Last Updated : Jun 26, 2019, 12:50 PM IST

For All Latest Updates

ABOUT THE AUTHOR

...view details