ಕರ್ನಾಟಕ

karnataka

ETV Bharat / state

ಕೊರೊನಾ ವಿಚಾರದಲ್ಲಿ ಸಿದ್ದರಾಮಯ್ಯ, ಈಶ್ವರ ಖಂಡ್ರೆ ರಾಜಕೀಯ : ಸಂಸದ ಭಗವಂತ ಖೂಬಾ - Siddaramaiah,Ishwar Khandre doing politics in time of Corona

ಆತ್ಮ ನಿರ್ಭರ್ ಯೋಜನೆಯ 20 ಲಕ್ಷ ಕೋಟಿ ರೂಪಾಯಿ ಅಂಕಿ ಅಂಶ ಕೇಂದ್ರ ಸರ್ಕಾರ ಸಾರ್ವಜನಿಕಗೊಳಿಸಿದೆ. ಇಂಥ ಮಹತ್ವಕಾಂಕ್ಷಿ ಯೋಜನೆ ಭೋಗಸ್ ಎನ್ನುವ ಕಾಂಗ್ರೆಸ್ ನಾಯಕರಿಗೆ ಇಂಥ ಯೋಜನೆಗಳು ಅರ್ಥ ಆಗೋದಿಲ್ಲ..

ಸಂಸದ ಭಗವಂತ ಖೂಬಾ ಆರೋಪ
ಸಂಸದ ಭಗವಂತ ಖೂಬಾ ಆರೋಪ

By

Published : Jul 10, 2020, 7:37 PM IST

Updated : Jul 10, 2020, 8:14 PM IST

ಬೀದರ್ :ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ಸಂಸದ ಭಗವಂತ ಖೂಬಾ ಆರೋಪಿಸಿದ್ದಾರೆ.

ಸಂಸದ ಭಗವಂತ ಖೂಬಾ ಆರೋಪ

ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಯೋಜನೆ ವಿಚಾರದಲ್ಲಿ ಕಾಂಗ್ರೆಸ್​ ನಾಯಕರು ಅನಗತ್ಯ ಹೇಳಿಕೆ ನೀಡ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಕೊರೊನಾದಂತ ಸಂಕಷ್ಟ ಕಾಲದಲ್ಲೂ ರಾಜಕಾರಣ ಮಾಡುವುದನ್ನು ಪ್ಯಾಷನ್ ಮಾಡಿಕೊಂಡಿದ್ದಾರೆ. ಆತ್ಮ ನಿರ್ಭರ್ ಯೋಜನೆಯ 20 ಲಕ್ಷ ಕೋಟಿ ರೂಪಾಯಿ ಅಂಕಿ ಅಂಶ ಕೇಂದ್ರ ಸರ್ಕಾರ ಸಾರ್ವಜನಿಕಗೊಳಿಸಿದೆ. ಇಂಥ ಮಹತ್ವಕಾಂಕ್ಷಿ ಯೋಜನೆ ಭೋಗಸ್ ಎನ್ನುವ ಕಾಂಗ್ರೆಸ್ ನಾಯಕರಿಗೆ ಇಂಥ ಯೋಜನೆಗಳು ಅರ್ಥ ಆಗೋದಿಲ್ಲ ಎಂದರು.

ರಾಜ್ಯದಲ್ಲಿ ಲಾಕ್​ಡೌನ್ ಅಳವಡಿಕೆ ಅವಶ್ಯಕತೆ ಇಲ್ಲ. ಜನರು ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಸುವ ಮೂಲಕ ಹೋರಾಡಬಹುದು ಎಂದರು. ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಈಶ್ವರಸಿಂಗ್ ಠಾಕೂರ್, ಅರಹಂತ ಸಾವಳೆ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Last Updated : Jul 10, 2020, 8:14 PM IST

ABOUT THE AUTHOR

...view details