ಕರ್ನಾಟಕ

karnataka

ETV Bharat / state

ಮಂಠಾಳ ಚೌಕಿ ಮಠದ ಪೀಠಾಧಿಪತಿ ಶ್ರೀ ಗುಹೇಶ್ವರ ಸ್ವಾಮೀಜಿ ಲಿಂಗೈಕ್ಯ - ಬಸವಕಲ್ಯಾಣದಲ್ಲಿ ಶ್ರೀ ಗುಹೇಶ್ವರ ಸ್ವಾಮೀಜಿ ಲಿಂಗೈಕ್ಯ,

ಮಂಠಾಳ ಚೌಕಿ ಮಠದ ಪೀಠಾಧಿಪತಿ ಶ್ರೀ ಗುಹೇಶ್ವರ ಸ್ವಾಮೀಜಿ ಲಿಂಗೈಕ್ಯಯಾಗಿದ್ದಾರೆ.

Shri Guheshwar Swamiji died, Shri Guheshwar Swamiji died in Basavakalyan, Shri Guheshwar Swamiji died in Basavakalyan news, ಶ್ರೀ ಗುಹೇಶ್ವರ ಸ್ವಾಮೀಜಿ ಲಿಂಗೈಕ್ಯ, ಬಸವಕಲ್ಯಾಣದಲ್ಲಿ ಶ್ರೀ ಗುಹೇಶ್ವರ ಸ್ವಾಮೀಜಿ ಲಿಂಗೈಕ್ಯ, ಶ್ರೀ ಗುಹೇಶ್ವರ ಸ್ವಾಮೀಜಿ ಲಿಂಗೈಕ್ಯ ಸುದ್ದಿ,
ಶ್ರೀ ಗುಹೇಶ್ವರ ಸ್ವಾಮೀಜಿ ಲಿಂಗೈಕ್ಯ

By

Published : Apr 14, 2021, 3:05 AM IST

ಬಸವಕಲ್ಯಾಣ: ಮಂಠಾಳ ಗ್ರಾಮದ ಚೌಕಿ ಮಠದ ಪೀಠಾಧಿಪತಿಗಳಾದ ಶ್ರೀ ಗುಹೇಶ್ವರ ಮಹಾ ಸ್ವಾಮೀಜಿಗಳು(75) ಲಿಂಗೈಕ್ಯರಾಗಿದ್ದಾರೆ.

ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಾಯಚೂರ ಜಿಲ್ಲೆಯವರಾದ ಇವರು ಕಳೆದ 60 ವರ್ಷಗಳಿಂದ ಮಂಠಾಳನ ಚೌಕಿ ಮಠದ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಚಿಟ್ಟಾ(ಕೆ), ಕೊಪ್ಪಳ ಜಿಲ್ಲೆಯ ಹೂವಿನ ಹಡಗಲಿ ಮಠ, ಬಳ್ಳಾರಿ ಜಿಲ್ಲೆಯ ಮಾಲಗಿತ್ತಿ, ಹಿರೇಮಲ್ಲನಕೇರೆ ಸೇರಿದಂತೆ 5 ಮಠಗಳಿಗೆ ಪೀಠಾಧಿಪತಿಗಳಾಗಿ ಕಾರ್ಯ ಸಲ್ಲಿಸಿದ್ದಾರೆ.

ಲಿಂಗೈಕ್ಯ ಶ್ರೀಗಳ ಅಂತ್ಯಸಂಸ್ಕಾರ ತಾಲೂಕಿನ ಮಂಠಾಳ ಗ್ರಾಮದ ಚೌಕಿ ಮಠದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಜರುಗಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

ABOUT THE AUTHOR

...view details