ಬೀದರ್: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಮಾಡಿಸಿದ, ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಸಿಸಿಟಿವಿ ಕಂಟ್ರೋಲ್ ರೂಂ ಸೀಜ್ ಮಾಡಿಸಲಾಗಿದೆ. ನಗರದ ಶಹಪೂರ್ ಗೇಟ್ ಬಳಿಯಿರುವ ಶಾಹೀನ್ ಶಿಕ್ಷಣ ಸಂಸ್ಥೆಯ, ಎರಡು ನೂರಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಕಂಟ್ರೋಲ್ ಮಾಡುವ ಕೊಠಡಿಗೆ ಬೀಗ ಜಡಿದು ಜಪ್ತಿ ಮಾಡಿಕೊಳ್ಳಲಾಗಿದೆ.
ಪ್ರಧಾನಿ ವಿರುದ್ಧ ಅವಹೇಳನಕಾರಿ ನಾಟಕ ಪ್ರದರ್ಶನ: ಶಾಹೀನ್ ಸಂಸ್ಥೆಯ ಕಂಟ್ರೋಲ್ ರೂಂ ಸೀಜ್...!
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಮಾಡಿಸಿದ, ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಸಿಸಿಟಿವಿ ಕಂಟ್ರೋಲ್ ರೂಂ ಸೀಜ್ ಮಾಡಿಸಲಾಗಿದೆ.
ಡಿವೈಎಸ್ಪಿ ಬಸವರಾಜ ಹೀರಾ ನೇತೃತ್ವದಲ್ಲಿ ಭೇಟಿ ನೀಡಿದ ತನಿಖಾ ಅಧಿಕಾರಿಗಳ ತಂಡ, ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್ ಹಾಗೂ ಸಹೋದರ ಮನ್ನಾನ್ ಶೇಠ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಶಾಹೀನ್ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ನಾಟಕ ಪ್ರದರ್ಶಿಸಿರುವ ಆರೋಪ ಕೇಳಿ ಬಂದಿತ್ತು. ಶಾಲಾ ಮಕ್ಕಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ನಾಟಕ ಪ್ರದರ್ಶನ ಮಾಡಿಸಿ, ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಅಸಂವಿಧಾನಿಕ ಪದವೊಂದನ್ನು ಬಳಸಿದ ವಿಡಿಯೋ ಒಂದು ವೈರಲ್ ಆಗಿತ್ತು.