ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರಕ್ಕೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ 8 ಖಾಸಗಿ ವಾಹನಗಳ ಜಪ್ತಿ - Maharashtra

ಹಬ್ಬದ ನಿಮಿತ್ತ ಬಸವಕಲ್ಯಾಣದಿಂದ ಮಹಾರಾಷ್ಟ್ರದ ತುಳಜಾಪುರಕ್ಕೆ ಜನರನ್ನು ಸಾಗಿಸುತ್ತಿದ್ದ 8 ಖಾಸಗಿ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಾರಿಗೆ ಬಸ್‌ಗಳ ಜೊತೆ ಪೈಪೋಟಿಗೆ ಇಳಿದ ಖಾಸಗಿ ವಾಹನಗಳು, ಬಸ್‌ಗಳಿಗಿಂತ ಕಡಿಮೆ ದರದಲ್ಲಿ ತುಳಜಾಪುರಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಪ್ರಯಾಣಿಕರಿಗೆ ಆಮಿಷ ಒಡ್ಡುತ್ತಿದ್ದವು.

8 ಖಾಸಗಿ ವಾಹನಗಳ ಜಪ್ತಿ

By

Published : Oct 3, 2019, 9:46 PM IST

ಬಸವಕಲ್ಯಾಣ: ದಸರಾ ಹಬ್ಬದ ನಿಮಿತ್ತ ಮಹಾರಾಷ್ಟ್ರದ ತುಳಜಾಪುರಕ್ಕೆ ಜನರನ್ನು ಸಾಗಿಸುತ್ತಿದ್ದ ಖಾಸಗಿ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸಿಪಿಐ ಮಲ್ಲಿಕಾರ್ಜುನ ಯಾತನೂರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ಇಲ್ಲಿಯ ಸಸ್ತಾಪುರ ಬಂಗ್ಲಾದಿಂದ ತುಳಜಾಪುರಕ್ಕೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ 8 ಖಾಸಗಿ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಹಬ್ಬದ ನಿಮಿತ್ತ ಮಾತೆ ತುಳಜಾ ಭವಾನಿ ಕ್ಷೇತ್ರ ತುಳಜಾಪುರಕ್ಕೆ ದೇವಿ ದರ್ಶನಕ್ಕಾಗಿ ತೆರಳುವ ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಿದೆ. ಆದರೆ ಸಾರಿಗೆ ಬಸ್‌ಗಳ ಜೊತೆ ಪೈಪೋಟಿಗೆ ಇಳಿದ ಖಾಸಗಿ ವಾಹನಗಳು 50 ರೂ. ಕಡಿಮೆ ದರದಲ್ಲಿ ತುಳಜಾಪುರಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಪ್ರಯಾಣಿಕರಿಗೆ ಆಮಿಷ ಒಡ್ಡುತ್ತಿದ್ದವು.

8 ಖಾಸಗಿ ವಾಹನಗಳ ಜಪ್ತಿ

ಹೀಗಾಗಿ ಜಾಗೃತರಾದ ಪೊಲೀಸರು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 8 ಖಾಸಗಿ ಕ್ರೂಸರ್ ವಾಹನಗಳನ್ನು ಜಪ್ತಿ ಮಾಡಿಕೊಳ್ಳುವ ಮೂಲಕ ಉಳಿದ ವಾಹನಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ABOUT THE AUTHOR

...view details