ಬೀದರ್: ಕೆಂಡ ಕಾರುವ ಸುಡು ಬಿಸಿಲಿನ ತಾಪಕ್ಕೆ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಕಾರ್ಗೆ ಹತ್ತಿದ್ದ ಬೆಂಕಿಗೆ ನೀರು ಹಾಕಿ ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಬೀದರ್ನಲ್ಲಿ ಬಿಸಿಲಿನ ತಾಪಕ್ಕೆ ಧಗ ಧಗನೆ ಹೊತ್ತಿ ಉರಿದ ಕಾರುಗಳು! - Fire in car
ಕೆಂಡ ಕಾರುವ ಸುಡು ಬಿಸಿಲಿನ ತಾಪಕ್ಕೆ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಕಾರ್ಗೆ ಹತ್ತಿದ್ದ ಬೆಂಕಿಗೆ ನೀರು ಹಾಕಿ ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಬೀದರ್ ತಾಲೂಕಿನ ಮರಖಲ್ ಗ್ರಾಮದ ಬಳಿ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ ಕಾರಿನಿಂದ ಎಸ್ಕೇಪ್ ಆಗ್ತಿದ್ದಂತೆ ಸ್ಥಳೀಯರು ಬೆಂಕಿಗೆ ನೀರು ಹಾಕಿ ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಬೀದರ್ ಭಾಗದಲ್ಲಿ ತಾಪಮಾನ ಈಗ 43 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಹಿನ್ನೆಲೆಯಲ್ಲಿ ರಸ್ತೆಗಳೆಲ್ಲಾ ಬೆಂಕಿ ಕೆಂಡದಂತಾಗಿವೆ.
ಇನ್ನು ಬೀದರ್ ನಗರದ ಚಿದ್ರಿ ರಸ್ತೆಯ ಶ್ರೀ ಫಂಕ್ಷನ್ ಹಾಲ್ ಬಳಿ ಸುಡು ಬಿಸಿಲಿಗೆ ವಿಸ್ತಾ ಕಾರಿಗೆ ಆಕಸ್ಮಿಕವಾಗಿ ಹೊತ್ತಿಕೊಂಡು ನಡು ರಸ್ತೆಯಲ್ಲಿ ಜನರ ಕಣ್ಮುಂದೆಯೇ ಬೆಂಕಿಗಾಹುತಿಯಾಗಿದೆ. ಟ್ಯಾಂಕರ್ ನೀರಿನಿಂದ ಬೆಂಕಿ ನಂದಿಸಲು ಯತ್ನ ಮಾಡಿತ್ತಾದರೂ ಕಾರು ಬೆಂಕಿಗೆ ಭಸ್ಮವಾಗಿದ್ದು, ಕಾರಿನಲ್ಲಿ ಜನರಿಲ್ಲದೆ ಇರುವುದರಿಂದ ಭಾರಿ ಅನಾಹುತ ತಪ್ಪಿದೆ.
TAGGED:
Fire in car