ಕರ್ನಾಟಕ

karnataka

ETV Bharat / state

ಸ್ಕೂಲ್ ವ್ಯಾನ್ ಪಲ್ಟಿ: ಮಕ್ಕಳಿಗೆ ಗಾಯ, ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ - ಮಕ್ಕಳಿಗೆ ಗಾಯ

ಬೀದರ್​​ನ ಸಪ್ತಗಿರಿ ಶಾಲೆಗೆ ಮಕ್ಕಳನ್ನು ಕರೆ ತರುತ್ತಿದ್ದ ಸ್ಕೂಲ್ ವ್ಯಾನ್ ಪಲ್ಟಿಯಾಗಿದ್ದು, ಮಕ್ಕಳಿಬ್ಬರು ಗಾಯಗೊಂಡಿದ್ದಾರೆ.

school van falls in bidar, two children's injured
ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ

By

Published : Jan 22, 2020, 5:15 PM IST

ಬೀದರ್: ಮಕ್ಕಳನ್ನು ಶಾಲೆಗೆ ಸಾಗಿಸುತ್ತಿದ್ದ ಸ್ಕೂಲ್ ವ್ಯಾನ್ ಪಲ್ಟಿಯಾಗಿದ್ದು, ಮಕ್ಕಳಿಬ್ಬರು ಗಾಯಗೊಂಡಿದ್ದಾರೆ. ವಿಷಯ ತಿಳಿದ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಪ್ತಗಿರಿ ಖಾಸಗಿ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ವ್ಯಾನ್ ನಗರದ ಚಿದ್ರಿ ಬಳಿ ಚಾಲಕನ ಅಜಾಗರೂಕತೆಯಿಂದ ವ್ಯಾನ್ ಪಲ್ಟಿಯಾಗಿದೆ ಎನ್ನಲಾಗಿದೆ‌.

ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ

ಗಾಯಗೊಂಡಿರುವ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ವಾಹನ ಅಪಘಾತ ವಿಷಯ ತಿಳಿದಿರುವ ಪಾಲಕರು ಶಾಲೆಗೆ ಆಗಮಿಸಿ, ಆಡಳಿತ ಮಂಡಳಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೂಡಲೇ ಚಾಲಕನನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details