ಬೀದರ್:ರೌಡಿಸಂ ಮಾಡಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದ ಪುಡಿ ರೌಡಿಗಳಿಗೆ ರೌಡಿ ಪರೇಡ್ನಲ್ಲಿ ಡಿವೈಎಸ್ಪಿ ದೇವರಾಜ್ ಇಂದು ಮೈಚಳಿ ಬಿಡಿಸಿದರು.
ಭಾಲ್ಕಿ ಉಪ ವಿಭಾಗದ ನೂತನ ಡಿವೈಎಸ್ಪಿ ಬಿ.ದೇವರಾಜ್ ಅವರು ಔರಾದ್, ಕಮಲಾ ನಗರ ಹಾಗೂ ಭಾಲ್ಕಿ ಸರ್ಕಲ್ ವಿಭಾಗದಲ್ಲಿ ರೌಡಿಗಳ ಚಲನವಲನದ ಬಗ್ಗೆ ಅವಲೋಕನ ನಡೆಸಿದರು.
ಪುಡಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ ದೇವರಾಜ್ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಬೇಡಿ. ಒಂದು ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ರು.
ಅಷ್ಟೇ ಅಲ್ಲದೆ, ಔರಾದ್ ಪಟ್ಟಣದಲ್ಲಿ ನಡುರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿ, ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಖಾಸಗಿ ವಾಹನ ಮಾಲೀಕರಿಗೂ ಒಂದೆಡೆ ಸೇರಿಸಿ ಎಚ್ಚರಿಸಿದರು. ನೀವು ಸಾರಿಗೆ ನಿಯಮ ಮೀರಿದ್ರೆ ನಮಗೆ ಕ್ರಮ ಅನಿವಾರ್ಯ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದಲೂ ಸಂಚಾರಕ್ಕೆ ತೊಂದರೆ ಆಗ್ತಿದೆ. ಇದನ್ನು ಅರ್ಥ ಮಾಡಕೊಳ್ಳಿ ಎಂದು ಹೇಳಿದ್ರು.