ಕರ್ನಾಟಕ

karnataka

ETV Bharat / state

ಬಸವಕಲ್ಯಾಣ: ಎಡಬಿಡದೆ ಸುರಿದ ಮಳೆಗೆ ಕುಸಿದ ಮನೆ ಮಾಳಿಗೆ - Roof of home collapse in Basavakalyan

ಮನೆಯವರೆಲ್ಲ ಇದೇ ಕೋಣೆಯಲ್ಲಿ ವಿಶ್ರಾಂತಿ ಪಡೀತಾರೆ. ಮನೆಯಲ್ಲಿ ಐದು ಜನರಿದ್ದು, ಒಂದು ಸಣ್ಣ ಹಾಲ್, ಒಂದು ಮಲಗುವ ಕೋಣೆ ಮತ್ತು ಒಂದು ಅಡುಗೆ ಕೋಣೆಯಿದ್ದು, ಅಡುಗೆ ಮನೆ ಮತ್ತು ಹಾಲ್ ಇರುವ ಸ್ಥಳದಲ್ಲಿ ತಗಡು ಹಾಕಲಾಗಿದೆ. ಆದರೆ ಮಲಗುವ ಕೋಣೆಯ ಮೇಲೆ ಮಾಳಿಗೆ ಇತ್ತು. ಈ ಮಾಳಿಗೆ ಕುಸಿದು ಬಿದ್ದಾಗ ಮನೆಯ ಒಡತಿ ಅಡುಗೆ ಮನೆಯಲ್ಲಿದ್ದರು. ಉಳಿದವರು ಹೊರಗಿದ್ದರು ಎನ್ನಲಾಗಿದೆ.

ಬಸವಕಲ್ಯಾಣ: ಎಡಬಿಡದೆ ಸುರಿದ ಮಳೆಗೆ ಮನೆ ಮಾಳಿಗೆ ಕುಸಿತ
ಬಸವಕಲ್ಯಾಣ: ಎಡಬಿಡದೆ ಸುರಿದ ಮಳೆಗೆ ಮನೆ ಮಾಳಿಗೆ ಕುಸಿತ

By

Published : Aug 21, 2020, 9:04 PM IST

Updated : Aug 21, 2020, 9:59 PM IST

ಬಸವಕಲ್ಯಾಣ: ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದರ ಮಾಳಿಗೆ ಕುಸಿದ ಘಟನೆ ನಗರದ ಹೊಸಪೇಟ್‌ಗಲ್ಲಿಯಲ್ಲಿ ನಡೆದಿದೆ. ಮಾಳಿಗೆ ಕುಸಿದು ಬಿದ್ದಾಗ ಈ ಕೋಣೆಯಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಳೆಗೆ ಕುಸಿದ ಮನೆ ಮಾಳಿಗೆ

ನಗರದ ವಾರ್ಡ್ ಸಂಖ್ಯೆ 7ರ ವ್ಯಾಪ್ತಿಯಲ್ಲಿಯ ಶ್ರೀಬಸವೇಶ್ವರ ದೇವಸ್ಥಾನ ರಸ್ತೆಯಲ್ಲಿ ಪದ್ಮಾವತಿ ಸುಣಗಾರ ಅವರ ಮನೆಯ ಮಾಳಿಗೆ ನೆನೆದು ಕುಸಿದು ಬಿದ್ದಿದೆ. ಕೋಣೆಯಲ್ಲಿಯ ಎಲ್ಲ ವಸ್ತುಗಳಿಗೆ ಹಾನಿಯಾಗಿವೆ.

ಮನೆಯವರೆಲ್ಲ ಇದೇ ಕೋಣೆಯಲ್ಲಿ ಮಲಗುತ್ತಾರೆ. ಮನೆಯಲ್ಲಿ ಐದು ಜನರಿದ್ದು, ಒಂದು ಸಣ್ಣ ಹಾಲ್, ಒಂದು ಮಲಗುವ ಕೋಣೆ ಮತ್ತು ಒಂದು ಅಡುಗೆ ಕೋಣೆಯಿದ್ದು, ಅಡುಗೆ ಮನೆ ಮತ್ತು ಹಾಲ್ ಇರುವ ಸ್ಥಳದಲ್ಲಿ ತಗಡು ಹಾಕಲಾಗಿದೆ. ಆದರೆ ಮಲಗುವ ಕೋಣೆಯ ಮೇಲೆ ಮಾಳಿಗೆ ಇತ್ತು. ಈ ಮಾಳಿಗೆ ಕುಸಿದು ಬಿದ್ದಾಗ ಮನೆಯ ಒಡತಿ ಅಡುಗೆ ಮನೆಯಲ್ಲಿದ್ದರು. ಉಳಿದವರು ಹೊರಗಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ್ ಹಾಗೂ ನಗರಸಭೆ ಪೌರಾಯುಕ್ತ ಗೌತಮ ಕಾಂಬಳೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Last Updated : Aug 21, 2020, 9:59 PM IST

ABOUT THE AUTHOR

...view details