ಕರ್ನಾಟಕ

karnataka

ETV Bharat / state

ನಿರ್ಗತಿಕ ಮಹಿಳೆಯರೊಂದಿಗೆ ತನ್ನ ವಾಂಛೆ ತೀರಿಸಿಕೊಳ್ತಿದ್ದ.. ಹುಟ್ಟುಡುಗೆಯಲ್ಲೇ ಸಿಕ್ಕಿಬಿದ್ದವನಿಗೆ ದನಕ್ಕೆ ಬಡಿದಂತೆ ಬಡಿದರು.. - Kannada news

ನಿರ್ಗತಿಕ ವಿಶೇಷ ಚೇತನ ಮಹಿಳೆಯರಿಗೆ ಒಂದೊತ್ತಿನ ಊಟ ಕೊಟ್ಟು ಪುಸಲಾಯಿಸಿ ಹಾಸಿಗೆಗೆ ಕರೆದು ಲೈಂಗಿಕ ದೌರ್ಜನ್ಯ ಮಾಡ್ತಿದ್ದ ವಿಕೃತ ಕಾಮುಕ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ. ಮುಂದೆ ನಾಲ್ಕು ಜನ್ಮಕ್ಕಾಗುವಷ್ಟು ಧರ್ಮದೇಟು ತಿಂದ.

ಊಟ ಕೊಟ್ಟು ನಿರ್ಗತಿಕ ವಿಶೇಷ ಚೇತನ ಮಹಿಳೆಯರ ಅತ್ಯಾಚಾರ ಮಾಡುತ್ತಿದ್ದ ಭೂಪನಿಗೆ ಸಾರ್ವಜನಿಕರಿಂದ ಬಿತ್ತು ಗೂಸ

By

Published : Jun 23, 2019, 11:16 AM IST

ಬೀದರ್ :ನಡುರಾತ್ರಿಯಲ್ಲಿ ನಿರ್ಗತಿಕ ವಿಶೇಷ ಚೇತನ ಮಹಿಳೆಯರಿಗೆ ಒಂದೊತ್ತಿನ ಊಟ ಕೊಟ್ಟು ಪುಸಲಾಯಿಸಿ ಹಾಸಿಗೆಗೆ ಕರೆದು ಲೈಂಗಿಕ ದೌರ್ಜನ್ಯ ಮಾಡ್ತಿದ್ದ ವಿಕೃತ ಕಾಮುಕ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸಖತ್ ಧರ್ಮದೇಟು ತಿಂದಿದ್ದಾನೆ.

ಬೀದರ್ ನಗರದ ರಸ್ತೆ ಪಕ್ಕದಲ್ಲಿ ಮಲಗ್ತಿದ್ದ ಬುದ್ದಿಮಾಂಧ್ಯ ಬಾಲಕಿಯರು, ಮಹಿಳೆಯರ ಮೇಲೆ ಅತ್ಯಾಚಾರ ಮಾಡ್ತಿದ್ದ ಈ ಭೂಪ, ಕೊನೆಗೂ ಜನರ ಕೈಗೆ ಸಿಕ್ಕಿದ್ದಾನೆ. ಭಿಕ್ಷೆ ಎತ್ತಿ ಬದುಕುತ್ತಿದ್ದ ನಿರ್ಗತಿಕ ಮಹಿಳೆಯರನ್ನ ಪುಸಲಾಯಿಸಿ ದೈಹಿಕವಾಗಿ ಬಳಸಿಕೊಳ್ತಿದ್ದ ಖದೀಮ, ಒಪ್ಪೊತ್ತಿನ ಊಟ ಕೊಟ್ಟು ಹಾಸಿಗೆಯ ಸುಖ ಪಡೆಯುತ್ತಿದ್ದ ಭಯಂಕರ ಸತ್ಯ ಬಯಲಾಗಿದೆ.

ಊಟ ಕೊಟ್ಟು ನಿರ್ಗತಿಕ ವಿಶೇಷ ಚೇತನ ಮಹಿಳೆಯರ ಅತ್ಯಾಚಾರ ಮಾಡುತ್ತಿದ್ದ ಭೂಪ

ಗಾಂಜಾ ನಶೆಯಲ್ಲಿ ಅಸಾಹಕ ಮಹಿಳೆಯರೊಂದಿಗೆ ಕಾಮತೃಷೆ ತೀರಿಸಿಕೊಳ್ತಿದ್ದ ಕಾಮಿಯನ್ನು ಸದ್ಯ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರಲ್ಲಿ ಖದೀಮ ಕಣ್ತಪ್ಪಿಸಿ ಓಡಿ ಹೋಗಿದ್ದಾನೆ. ಕಳೆದೆರಡು ವರ್ಷಗಳಿಂದ ನಗರದಲ್ಲಿ ಭಿಕ್ಷುಕಿಯರು ಗರ್ಭಿಣಿಯಾಗಿದ್ರು. ಇದರಿಂದ ತಡರಾತ್ರಿಯಲ್ಲಿ ಜನರೇ ಸೇರಿ ಈ ವಿಕೃತ ಕಾಮಿಯ ನಿಜ ಬಣ್ಣ ಬಯಲು ಮಾಡಿದ್ದಾರೆ.

ABOUT THE AUTHOR

...view details