ಕರ್ನಾಟಕ

karnataka

ETV Bharat / state

ಮಕ್ಕಳು ಮಾತಾಡಿದ್ರೆ ಪೋಷಕರ ಮೇಲೆ ಕೇಸ್ ಹಾಕ್ತಾರೆ ಬಿಜೆಪಿಯವರು: ರಿಜ್ವಾನ್ ಅರ್ಷದ್​ - ಅನಂತಕುಮಾರ್ ಹೆಗಡೆ ವಿರುದ್ಧ ರಿಜ್ವಾನ್ ಅರ್ಷದ್​ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ನಾಟಕ ಪ್ರದರ್ಶನ ಮಾಡಿದಕ್ಕೆ ಶಿಕ್ಷಕಿ ಹಾಗೂ ಬಾಲಕಿ ತಾಯಿಯನ್ನು ಬಂಧಿಸಿರುವ ಪೊಲೀಸರು, ಮಹಾತ್ಮ ಗಾಂಧೀಜಿ ಅವರ ಬಗ್ಗೆ ಬಿಜೆಪಿಯವರ ಅನುಮತಿ ಪಡೆದೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಪ್ರಶ್ನಿಸಿದ್ದಾರೆ.

rizwan-arshad-reaction-on-ananthkumar-hegde-statement
ಶಾಸಕ ರಿಜ್ವಾನ್ ಅರ್ಷದ್

By

Published : Feb 4, 2020, 9:08 PM IST

ಬೀದರ್:ಮಕ್ಕಳು ಮಾತಾಡಿದ್ರೆ ಪೋಷಕರ ಮೇಲೆ ಕೇಸ್ ಹಾಕಿ ಜೈಲಿಗೆ ತಳ್ಳುವ ಬಿಜೆಪಿ ಸರ್ಕಾರ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬಗ್ಗೆಸಂಸದ ಅನಂತಕುಮಾರ್ ಹೆಗ್ಡೆಅವಹೇಳನಕಾರಿಯಾಗಿ ಮಾತನಾಡಿದ್ರೂ ಸುಮ್ಮನಾಗಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧಿನ ಕೈದಿಗಳಾಗಿರುವ ಶಾಹೀನ್ ಶಿಕ್ಷಣ ಸಂಸ್ಥೆ ಮುಖ್ಯಗುರು ಫರಿದಾ ಬೇಗಂ ಹಾಗೂ ನಾಟಕ ಪ್ರದರ್ಶನ ಮಾಡಿದ್ದ ಬಾಲಕಿಯ ತಾಯಿ ನಬಿದಾ ಬೇಗಂ ಅವರನ್ನು ಭೇಟಿ ಮಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಪ್ರದರ್ಶನ ಮಾಡಿದಕ್ಕೆ ಶಿಕ್ಷಕಿ ಹಾಗೂ ಬಾಲಕಿ ತಾಯಿಯನ್ನು ಬಂಧಿಸಿರುವ ಪೊಲೀಸರು, ಮಹಾತ್ಮ ಗಾಂಧೀಜಿ ಅವರ ಬಗ್ಗೆ ಬಿಜೆಪಿಯವರ ಅನುಮತಿ ಪಡೆದೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನೆ ಮಾಡಿದರು.

ಬೀದರ್ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಶಾಸಕ ರಿಜ್ವಾನ್ ಅರ್ಷದ್

ಬಿಜೆಪಿ ಅವರಿಗೆ ನೈತಿಕತೆ ಇದ್ದರೆ ಅನಂತಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲಿ, ಅವರಿಗೆ ಬಾಯಿಗೆ ಬಂದಂತೆ ಮಾತನಾಡಲು ಬಿಟ್ಟು ಹೀಗೆ ಮಕ್ಕಳು ಮಾಡಿದ ತಪ್ಪಿಗೆ ಪೋಷಕರ ಬಂಧಿಸುವುದು ಎಷ್ಟು ಸರಿ. ಮಂಗಳೂರಿನ ವಿಮಾನದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಅವನ ವಿಚಾರಣೆ ಕೂಡ ಮಾಡಿರಲಿಕ್ಕಿಲ್ಲ. ಅದಕ್ಕಿಂತ ಹೆಚ್ವಾಗಿ ಈ ಮಕ್ಕಳ ವಿಚಾರಣೆ ಮಾಡ್ತಿದ್ದಾರೆ ಎಂದು ರಿಜ್ವಾನ್ ಅರ್ಷದ್ ಅಸಮಾಧಾನ ವ್ಯಕ್ತಪಡಿಸಿದರು.

For All Latest Updates

ABOUT THE AUTHOR

...view details