ಬಸವಕಲ್ಯಾಣ: ಮೋರಖಂಡಿ ಪಿಡಿಒ ವಿರುದ್ಧ ಕೇಳಿ ಬಂದಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇಲ್ಲಸಲ್ಲದ ಆರೋಪ ಹೊರಿಸಿ ವರ್ಗಾವಣೆಗೊಳಿಸಲು ಕೆಲವರಿಂದ ನಡೆಯುತ್ತಿರುವ ಷಡ್ಯಂತ್ರಕ್ಕೆ ಅವಕಾಶ ನೀಡಬಾರದು ಎಂದು ದಲಿತಪರ ಸಂಘಟನೆ ಒತ್ತಾಯಿಸಿದೆ.
ಪಿಡಿಒ ವರ್ಗಾವಣೆಗೊಳಿಸದಂತೆ ಮನವಿ
ಬಸವಕಲ್ಯಾಣ ತಾಲೂಕಿನ ಮೋರಖಂಡಿ ಪಿಡಿಒ ವಿರುದ್ಧ ಕೇಳಿ ಬಂದಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇಲ್ಲಸಲ್ಲದ ಆರೋಪ ಹೊರಿಸಿ ವರ್ಗಾವಣೆಗೊಳಿಸಲು ಕೆಲವರಿಂದ ನಡೆಯುತ್ತಿರುವ ಷಡ್ಯಂತ್ರಕ್ಕೆ ಅವಕಾಶ ನೀಡಬಾರದು ಎಂದು ದಲಿತಪರ ಸಂಘಟನೆ ಒತ್ತಾಯಿಸಿದೆ.
ತಾಲೂಕಿನ ಮೋರಖಂಡಿ ಗ್ರಾಮ ಪಂಚಾಯತ್ ಪಿಡಿಒ ಸುಗಂಧಾ ವಿರುದ್ಧ ಗ್ರಾಮಸ್ಥರು ಸೇರಿ ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮದವರು ಸೋಮವಾರ ಹಾಗೂ ಮಂಗಳವಾರ ಪ್ರತಿಭಟನೆ ನಡೆಸಿದ್ದರು. ದೂರು ನೀಡಿದ ಹಿನ್ನೆಲೆ ಬುಧವಾರ ಅದಕ್ಕೆ ಪ್ರತಿಯಾಗಿ ಇಲ್ಲಿಯ ತಾಪಂಗೆ ಆಗಮಿಸಿದ ಕೆಲ ಗ್ರಾಪಂ ಸದಸ್ಯರು ಹಾಗೂ ದಲಿತಪರ ಸಂಘಟನೆಗಳ ಮುಖಂಡರ ನಿಯೋಗದಿಂದ ತಾಪಂ ಇಒ ಮಡೋಳಪ್ಪ ಪಿ.ಎಸ್. ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಾಪುರ ಕ್ಷೇತ್ರದ ಜಿಪಂ ಸದಸ್ಯ ಅಣ್ಣಾರಾವ ರಾಠೋಡ ಹಾಗೂ ಪುತ್ರ ಮತ್ತು ಅಳಿಯ ಸೇರಿಕೊಂಡು ತಮ್ಮ ಸಂಬಂಧಿಕರಾದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಭಾವದಿಂದ ಪಿಡಿಒ ಅವರನ್ನು ಹೇಗಾದರೂ ಮಾಡಿ ಇಲ್ಲಿಂದ ಎತ್ತಂಗಡಿ ಮಾಡಿಸಬೇಕು ಎನ್ನುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ರು. ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡಿ ಪಿಡಿಒ ವಿರುದ್ಧ ಪ್ರತಿಭಟನೆ ನಡೆಸಲು ಪ್ರೇರೆಪಿಸುತಿದ್ದಾರೆ ಎಂದು ಆರೋಪಿಸಿದ್ದಾರೆ.