ಕರ್ನಾಟಕ

karnataka

ETV Bharat / state

ಬಸವಕಲ್ಯಾಣ: ಗ್ರಾಮ ಸಹಾಯಕ ನೌಕರರ ಬೇಡಿಕೆ ಈಡೇರಿಸಲು ಒತ್ತಾಯ

ಗ್ರಾಮ ಸಹಾಯಕ ಬೇಡಿಕೆಗಳನ್ನು ಈಡೇರಿಸಬೇಕು. ಹಲವು ವರ್ಷಗಳಿಂದ ಹುದ್ದೆ ಖಾಯಂಗೊಳಿಸುವಂತೆ ಆಗ್ರಹಿಸಲಾಗುತ್ತಿದೆ ಸರ್ಕಾರ ಕೂಡಲೇ ಕ್ರಮ ವಹಿಸುವಂತೆ ವಿಭಾಗಮಟ್ಟದ ಸಭೆಯಲ್ಲಿ ಒತ್ತಾಯಿಸಲಾಯಿತು.

regional meeeting in bidar
ಗ್ರಾಮ ಸಹಾಯಕ ನೌಕರರ ಬೇಡಿಕೆ ಈಡೇರಿಸಲು ಒತ್ತಾಯ

By

Published : Aug 27, 2020, 9:48 PM IST

ಬಸವಕಲ್ಯಾಣ: ಹಲವು ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಗ್ರಾಮ ಸಹಾಯಕರ ಹುದ್ದೆಯನ್ನು ಖಾಯಂಗೊಳಿಸಬೇಕು ಎಂದು ಜಿಲ್ಲೆಯ ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಬಲಭೀಮ ಹುಲಿಮನಿ ಒತ್ತಾಯಿಸಿದರು.

ಗ್ರಾಮ ಸಹಾಯಕ ನೌಕರರ ಬೇಡಿಕೆ ಈಡೇರಿಸಲು ಒತ್ತಾಯ

ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ವತಿಯಿಂದ ಆಯೋಜಿಸಿದ್ದ ಕಲಬುರ್ಗಿ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಸಹಾಯಕ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು. ಕೂಡಲೇ ಸರ್ಕಾರ ಇದಕ್ಕೆ ಸ್ಪಂದಿಸಬೇಕು ಎಂದರು.

ಕಂದಾಯ ಇಲಾಖೆಯ ಹಲವು ಯೋಜನೆ, ಕೆಲಸಗಳಲ್ಲಿ ಗ್ರಾಮ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ನಿಗದಿತ ಸಮಯಕ್ಕೆ ವೇತನ ನೀಡುತ್ತಿಲ್ಲ. ಇದರಿಂದ ಅವರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೇತ್ರೆ ಮಾತನಾಡಿ, ಗ್ರಾಮ ಸಹಾಯಕರ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ಹಾಗೂ ಸರ್ಕಾರದ ಸೌಲಭ್ಯ ದೊರಕಿಸಿ ಕೊಡುವಲ್ಲಿ ನಿಮ್ಮೊಂದಿಗೆ ಇರುವದಾಗಿ ಭರವಸೆ ನೀಡಿದರು.

ವಿಭಾಗಿಯ ಜಂಟಿ ಕಾರ್ಯದರ್ಶಿ ಎನ್ ವೆಂಕಟೇಶ್, ವಿಭಾಗೀಯ ಜಿಲ್ಲಾ ಪದಾಧಿಕಾರಿಗಳಾದ ಕಲಬುರಗಿಯ ಎಂ. ಹೊಸಮನಿ, ರಾಯಚೂರಿನ ಸದಾಶಿವ, ಬಳ್ಳಾರಿಯ ರಾಮಾಂಜನೇಯ, ಯಾದಗಿರಿ ಮಲ್ಲಪ್ಪ, ಡಿ.ಹೊನ್ನೇಶ, ಜಿಲ್ಲಾ ಕಾರ್ಯದರ್ಶಿ ಸುಧಾಕರ ಇಟ್ಟಿಗಿ, ತಾಲೂಕು ಅಧ್ಯಕ್ಷ ಲಕ್ಷ್ಮಣ ಜಮಾದಾರ, ವೀರಣ್ಣ ಮಜಕುರಿ, ಸಂಜು ಮಮದಾಪುರ ಇದ್ದರು.

ABOUT THE AUTHOR

...view details