ಕರ್ನಾಟಕ

karnataka

ETV Bharat / state

ಪಡಿತರ ಅಕ್ಕಿ ಕಾಳಸಂತೆಗೆ ಮಾರಾಟ: ಗೋಡೌನ್​​​​ ವ್ಯವಸ್ಥಾಪಕನ ಬಂಧನ - ration card rice

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬೀದರ್ ನಗರ ಸಗಟು ಮಳಿಗೆ ವ್ಯವಸ್ಥಾಪಕ ಮೋಹನ ಶರಣಪ್ಪ ಬಂಧಿತ ಆರೋಪಿ.

ಗೋಡೌನ್​​​​ ವ್ಯವಸ್ಥಾಪಕನ ಬಂಧನ

By

Published : Sep 21, 2019, 5:47 AM IST

ಬೀದರ್:ಬಡವರಿಗೆ ಉಚಿತವಾಗಿ ವಿತರಿಸಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಗೆ ಮಾರಾಟ ಮಾಡಿದ ಸರ್ಕಾರಿ ಅಧಿಕಾರಿಯನ್ನು ಶುಕ್ರವಾರ ಬಂಧಿಸಲಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬೀದರ್ ನಗರ ಸಗಟು ಮಳಿಗೆ ವ್ಯವಸ್ಥಾಪಕ ಮೋಹನ ಶರಣಪ್ಪ
ಬಂಧಿತ ಆರೋಪಿ.

ವಶಪಡಿಸಿಕೊಳ್ಳಲಾದ ಲಾರಿ ಮತ್ತು ಅಕ್ಕಿ ಮೂಟೆಗಳು

250 ಕ್ವಿಂಟಾಲ್(50 ಕೆ.ಜಿ. ತೂಕದ 500 ಪ್ಯಾಕೆಟ್) ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲೆಂದು ಬೀದರ್​​​​​​ನಿಂದ ಮುಂಬೈಗೆ ಸಾಗಿಸುವಾಗ ಬಸವಕಲ್ಯಾಣದ ಸಸ್ತಾಪೂರ ಬಂಗ್ಲಾ ಬಳಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಾರಿ ಸಮೇತ ಅಕ್ಕಿ ವಶಪಡಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಬಸವಕಲ್ಯಾಣ ನಗರ ಠಾಣೆ ಪೊಲೀಸರು, ಬೀದರ್ ಗೋಡೌನ್ ವ್ಯವಸ್ಥಾಪಕನನ್ನು ಬಂಧಿಸಿದ್ದಾರೆ.

ABOUT THE AUTHOR

...view details