ಬೀದರ್ : ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಸ್ವಗ್ರಾಮ ಔರಾದ್ ತಾಲೂಕಿನ ಘಮಸುಬಾಯಿ ತಾಂಡಾದ ನಿವಾಸದಲ್ಲಿ ತಮ್ಮ ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡು ಸಿಹಿ ತಿನ್ನುವ ಮೂಲಕ ಹಬ್ಬವನ್ನು ಆಚರಿಸಿದರು. ಲಂಬಾಣಿ ಸಾಂಪ್ರದಾಯಿಕ ಉಡುಗೆ ತೊಟ್ಟ ಸಹೋದರಿಯರು, ತಮ್ಮನ ಸುದೀರ್ಘ ಆಯಸ್ಸಿಗೆ ಪ್ರಾರ್ಥನೆ ಮಾಡಿದರು.
ಲಂಬಾಣಿ ಉಡುಗೆ ತೊಟ್ಟ ಅಣ್ಣನಿಗೆ ರಾಖಿ ಕಟ್ಟಿದ ಸಚಿವ ಪ್ರಭು ಚೌಹಾಣ್ ಸಹೋದರಿಯರು.. - ಲಂಬಾಣಿ ಉಡುಗೆ ತೊಟ್ಟ ಅಣ್ಣನಿಗೆ ರಾಖಿ ಕಟ್ಟಿದ ಪ್ರಭು ಚವ್ಹಾಣ್ ಸಹೋದರಿಯರು
ಕೊರೊನಾ ನಿಯಂತ್ರಣಕ್ಕೆ ಜಾರಿಯಲ್ಲಿರುವ ವಿಕೇಂಡ್ ಕರ್ಫ್ಯೂ ನಡುವೆಯೂ ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಕೊರೊನಾ ಭಯದಿಂದ ರಸ್ತೆ ಮೇಲೆ ರಾಖಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಶೇ. 60 ರಷ್ಟು ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ..
ಅಣ್ಣನಿಗೆ ರಾಖಿ ಕಟ್ಟಿದ ಪ್ರಭು ಚವ್ಹಾಣ್ ಸಹೋದರಿಯರು
ಇನ್ನು, ಕೊರೊನಾ ನಿಯಂತ್ರಣಕ್ಕೆ ಜಾರಿಯಲ್ಲಿರುವ ವಿಕೇಂಡ್ ಕರ್ಫ್ಯೂ ನಡುವೆಯೂ ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಕೊರೊನಾ ಭಯದಿಂದ ರಸ್ತೆ ಮೇಲೆ ರಾಖಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಶೇ.60ರಷ್ಟು ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ. ಶ್ರಾವಣ ಮಾಸದ ಪವಿತ್ರ ಹಬ್ಬಗಳಲ್ಲಿ ಒಂದಾದ ರಕ್ಷಾ ಬಂಧನ ಹಬ್ಬಕ್ಕೆ ಕೊರೊನಾ ಹೊಡೆತದಿಂದಾಗಿ ಸಡಗರ ಕಮ್ಮಿಯಾಗಿದೆ.