ಕರ್ನಾಟಕ

karnataka

ETV Bharat / state

ಶಾಸಕ ಬಿ ನಾರಾಯಣರಾವ್ ಪತ್ನಿಗೆ ಶೋಕ ಸಂದೇಶ​ ಕಳುಹಿಸಿದ ರಾಹುಲ್ ಗಾಂಧಿ.. - ಶಾಸಕ ಬಿ.ನಾರಾಯಣರಾವ್​ ನಿಧನ

ತಮ್ಮ ಕ್ಷೇತ್ರದ ಅಭಿವೃದ್ಧಿಗೆ ದಣಿವರಿಯದೆ ಕೆಲಸ ಮಾಡಿದವರು, ನ್ಯಾಯದ ಬಗೆಗಿನ ಅವರ ಬದ್ಧತೆ ಮತ್ತು ದೃಢ ನಿಲುವು ನಮಗೆ ಸ್ಫೂರ್ತಿ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರ ನಮ್ರತೆ ಮತ್ತು ಉದಾರವಾಗಿ ರಾಜಕೀಯವಾಗಿ ಗಳಿಸಿದ ಜನರ ಪ್ರೀತಿ, ವಿಶ್ವಾಸ ಮೆಚ್ಚುವಂತಹದ್ದಾಗಿದೆ..

Rahul Gandhi
ರಾಹುಲ್ ಗಾಂಧಿ

By

Published : Sep 25, 2020, 10:19 PM IST

ಬಸವಕಲ್ಯಾಣ :ಕೊರೊನಾ ಸೋಂಕಿನಿಂದ ಮೃತಪಟ್ಟ ಕಾಂಗ್ರೆಸ್ ಶಾಸಕ ಬಿ ನಾರಾಯಣರಾವ್​ ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಸಕ ಬಿ.ನಾರಾಯಣರಾವ್​ ಅವರ ಪತ್ನಿ ಮಲ್ಲಮ್ಮ ಅವರ ಹೆಸರಿನಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅವರ ಮೂಲಕ ಪತ್ರ ಬರೆದಿರುವ ರಾಹುಲ್ ಗಾಂಧಿ ಅವರು, ನಿಮ್ಮ ಪತಿಯಾಗಿರುವ ಶಾಸಕ ಬಿ.ನಾರಾಯಣರಾವ್ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಾವು ಕಾಂಗ್ರೆಸ್ ಕುಟುಂಬದ ಒಬ್ಬ ನಿಷ್ಠಾವಂತ ಸದಸ್ಯರನ್ನು ಕಳೆದು ಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಸಂತಾಪ ಪತ್ರವನ್ನು ಮಲ್ಲಮ್ಮ ನವರಿಗೆ ನೀಡಿದ ಈಶ್ವರ ಖಂಡ್ರೆ

ನಾರಾಯಣರಾವ್​ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ದಣಿವರಿಯದೆ ಕೆಲಸ ಮಾಡಿದವರು, ನ್ಯಾಯದ ಬಗೆಗಿನ ಅವರ ಬದ್ಧತೆ ಮತ್ತು ದೃಢ ನಿಲುವು ನಮಗೆ ಸ್ಫೂರ್ತಿ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರ ನಮ್ರತೆ ಮತ್ತು ಉದಾರವಾಗಿ ರಾಜಕೀಯವಾಗಿ ಗಳಿಸಿದ ಜನರ ಪ್ರೀತಿ, ವಿಶ್ವಾಸ ಮೆಚ್ಚುವಂತಹದ್ದಾಗಿದೆ. ಬಿ.ನಾರಾಯಣರಾವ್​ ಕುಟುಂಬ ಸದಸ್ಯರಿಗೆ ದುಃಖ ತಡೆದು ಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು ಪತ್ರದಲ್ಲಿ ರಾಹುಲ್​ ಗಾಂಧಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರು ಬರೆದ ಸಂತಾಪ ಪತ್ರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಶಾಸಕ ಬಿ.ನಾರಾಯಣರಾವ್​ ಅವರ ಪತ್ನಿ ಮಲ್ಲಮನವರಿಗೆ ಹಸ್ತಾಂತರಿಸಿದರು. ಇದೇ ವೇಳೆ ಈಶ್ವರ ಖಂಡ್ರೆ ಮಾತನಾಡಿ, ಶರಣರ ನಾಡು ಬಸವಕಲ್ಯಾಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಅನುಭವ ಮಂಟಪದ ನಿರ್ಮಾಣ ಸೇರಿ ಬಿ.ನಾರಾಯಣರಾವ ಅವರು ಅನೇಕ ಕನಸುಗಳನ್ನು ಕಂಡಿದ್ದರು.

ಆದರೆ, ಅವರ ಅಕಾಲಿಕ ಮರಣದಿಂದ ಅವರ ಕನಸುಗಳು ಅರ್ಧಕ್ಕೆ ನಿಲ್ಲುವಂತಾಗಿವೆ. ನಾರಾಯಣರಾವ್​ ಅವರ ನಿಧನದಿಂದಾಗಿ ವೈಯಕ್ತಿಕವಾಗಿ ನನಗೆ ಮತ್ತು ಕಾಂಗ್ರೆಸ್ ಪಕ್ಷ ಸೇರಿದಂತೆ ಕಲ್ಯಾಣ ನಾಡಿಗೆ ಭರಿಸಲಾಗದ ನಷ್ಟವಾಗಿದೆ. ಅವರು ಕಂಡ ಕನಸುಗಳನ್ನು ಪೂರ್ಣಗೊಳಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ABOUT THE AUTHOR

...view details