ಕರ್ನಾಟಕ

karnataka

ETV Bharat / state

74 ಲಕ್ಷ ರೂ. ಮೌಲ್ಯದ ಚೆಕ್​ಗಳನ್ನು ವಿತರಿಸಿದ ಶಾಸಕ ರಹಿಂಖಾನ್ - Bidar latest news

ಶಾಸಕ ರಹಿಂಖಾನ್ ಅವರು ಗಂಗಾಕಲ್ಯಾಣ ನೀರಾವರಿ ಯೋಜನೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಾಲದ ಚೆಕ್​ಗಳನ್ನು ವಿತರಣೆ ಮಾಡಿದರು.

Raheem Khan
Raheem Khan

By

Published : Aug 16, 2020, 5:26 PM IST

ಬೀದರ್:ಬೀದರ್ ಉತ್ತರ ವಿಧಾನಸಭೆ ಕ್ಷೇತ್ರದ ವಿವಿಧ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಶಾಸಕ ರಹಿಂಖಾನ್ ಅವರು 74 ಲಕ್ಷ ರೂ‌ ಮೌಲ್ಯದ ಚೆಕ್​ಗಳನ್ನು ಹಸ್ತಾಂತರಿಸಿದರು.

ನಗರದ ಚಿದ್ರಿ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಗಂಗಾಕಲ್ಯಾಣ ನೀರಾವರಿ ಯೋಜನೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಾಲದ ಚೆಕ್​​ಗಳನ್ನು ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಕೊರೊನಾ ಕಂಟಕದ ನಡುವೆ ಸಂಕಷ್ಟದಲ್ಲಿರುವ ಜನರಿಗೆ ಅದರಲ್ಲೂ ವಿಶೇಷವಾಗಿ ಸಣ್ಣ ವ್ಯಾಪಾರಿಗಳ ಬದುಕು ದುಸ್ತರವಾಗಿದೆ. ಈ ನಡುವೆ ಸರ್ಕಾರ ನೀಡುವ ಸಾಲದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ಅಲ್ಲದೆ ಬಡ ರೈತರು ತಮ್ಮ ಗದ್ದೆಯಲ್ಲಿ ಕೊಳವೆ ಬಾವಿ ತೊಡುವ ಮೂಲಕ ವಿದ್ಯುತ್ ಸಂಪರ್ಕ, ಮೋಟಾರ್ ವ್ಯವಸ್ಥೆ ಕೂಡ ಸರ್ಕಾರ ಮಾಡಿಕೊಟ್ಟಿರುವುದು ರೈತರನ್ನು ಬಲಪಡಿಸುವ ಕಾರ್ಯವಾಗಿದೆ ಎಂದರು.

ABOUT THE AUTHOR

...view details