ಹೊಸಪೇಟೆ:ನಗರದ ಸಹಕಾರ ಸಂಘ ನ್ಯಾಯಾಲಯಕ್ಕೆ ರಾಯಚೂರು, ಬಳ್ಳಾರಿ, ಕೊಪ್ಪಳ(ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ವಿಚಾರಣೆಗೆ ಹಾಜರಾದರು.
ರಾಬಕೊ ಅಧ್ಯಕ್ಷ ಭೀಮಾನಾಯ್ಕ ನ್ಯಾಯಾಲಯಕ್ಕೆ ಹಾಜರ್ - Bheemanayka attends court
ರಾಯಚೂರು, ಬಳ್ಳಾರಿ, ಕೊಪ್ಪಳ(ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ನಗರದ ಸಹಕಾರ ಸಂಘ ನ್ಯಾಯಾಲಯದಲ್ಲಿ ವಿಚರಣೆಗೆ ಹಾಜರಾದರು.

ರಾಬಕೊ ಅಧ್ಯಕ್ಷ ಭೀಮಾನಾಯ್ಕ ನ್ಯಾಯಾಲಯಕ್ಕೆ ಹಾಜರ್
ಸಹಕಾರ ಸಂಘಗಳ ಸಹಾಯಕ ನಿಬಂಧಕ ಲಿಯಾಕತ್ ಅಲಿ ಅವರು ಮಾತನಾಡಿ, ಭೀಮಾನಾಯ್ಕ ಅವರು ತಪ್ಪು ದಾಖಲೆಗಳನ್ನು ಸಲ್ಲಿಸಿ ಅಧ್ಯಕ್ಷರಾಗಿದ್ದಾರೆ. ಅವರನ್ನು ಅನರ್ಹಗೊಳಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಅವರಿಂದ ದಾಖಲೆಗಳನ್ನು ಪಡೆಯಲಾಗಿದೆ. ಮುಂದಿನ ವಿಚಾರಣೆ ಸೆ.14 ರಂದು ನಡೆಯಲಿದೆ ಎಂದು ತಿಳಿಸಿದರು.