ಬೀದರ್ :ಹಣಕಾಸಿನ ವಿಚಾರಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಎರಡು ಕುಟುಂಬದ ಸದಸ್ಯರು ನಡು ಬೀದಿಯಲ್ಲಿ ಹಿಗ್ಗಾ ಮುಗ್ಗಾ ಹೊಡೆದಾಡಿಕೊಂಡಿರುವ ಘಟನೆ ಬೀದರ್ನಲ್ಲಿ ನಡೆದಿದೆ.
ಹಣದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಫೈಟ್... ಹೊಡೆದಾಟದ ವಿಡಿಯೋ ವೈರಲ್! - undefined
ಹಣಕಾಸಿನ ವಿಚಾರಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಎರಡು ಕುಟುಂಬದ ಸದಸ್ಯರು ನಡು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.

ರಸ್ತೆಯಲ್ಲೆ ಮಾರಾಮಾರಿ
ನಗರದ ಭಗತಸಿಂಗ್ ವೃತದ ಬಳಿ ಜಮಾಯಿಸಿದ ಎರಡು ಕುಟುಂಬದ ಸದಸ್ಯರು ಮಾತು ಮಾತಿಗೆ ಬೆಳೆದು ಕೈ-ಕೈ ಮಿಲಾಯಿಸಿಕೊಂಡರು. ನೋಡು ನೊಡುತ್ತಲೇ ಎರಡು ಕುಟುಂಬದ ಮಹಿಳೆಯರು ಪುರುಷರ ಒಬ್ಬರ ಮೇಲೊಬ್ಬರು ಬಿದ್ದು ಹೊಡೆದಾಡಿಕೊಳ್ಳಲಾರಂಭಿಸಿದರು. ಈ ಜಗಳ ನಗರದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು.
ರಸ್ತೆಯಲ್ಲೆ ಮಾರಾಮಾರಿ
ಆದರೆ ಇವರು ಯಾವ ಊರಿನವರು ಯಾಕೆ ಹೀಗೆ ಮಾಡಕೊಂಡ್ರು ಎನ್ನುವಷ್ಟರಲ್ಲಿ ಎರಡು ಕುಟುಂಬದ ಸದಸ್ಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯ ವಿಡಿಯೋ ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.