ಬೀದರ್ : ಅಕ್ರಮ, ಅವ್ಯವಹಾರದ ದಾಖಲೆಗಳಿಗೆ ಸಹಿ ಮಾಡಲು ಒಪ್ಪದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಪಂಚಾಯತ್ ಕಚೇರಿಯಲ್ಲಿ ಎರಡು ಗಂಟೆಗಳ ಕಾಲ ಕೂಡಿ ಹಾಕಿ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಅಕ್ರಮ ದಾಖಲೆಗಳಿಗೆ ಸಹಿ ಮಾಡದ್ದಕ್ಕೆ ಪಿಡಿಓಗೆ ದಿಗ್ಬಂಧನ! - PDO blocked for not signing illegal documents
ಭಾಲ್ಕಿ ತಾಲೂಕಿನ ಇಂಚೂರ ಗ್ರಾಮ ಪಂಚಾಯತ್ ಪಿಡಿಓ ಜ್ಞಾನೇಂದ್ರ ಆರ್. ಹೊಳ್ಕರ ಎಂಬವರನ್ನು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗ್ರಾಮದ ಇಬ್ಬರು ಮುಖಂಡರು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಅಕ್ರಮವಾಗಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಸಹಿ ಮಾಡಲು ಒಪ್ಪದಕ್ಕೆ ಎರಡು ಗಂಟೆಗಳ ಕಾಲ ಕೂಡಿ ಹಾಕಿ ಕಿರುಕುಳ ನೀಡಿದ್ದಾರೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ಇಂಚೂರ ಗ್ರಾಮ ಪಂಚಾಯತ್ ಪಿಡಿಓ ಜ್ಞಾನೇಂದ್ರ ಆರ್. ಹೊಳ್ಕರ ಎಂಬವರನ್ನು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗ್ರಾಮದ ಇಬ್ಬರು ಮುಖಂಡರು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಅಕ್ರಮವಾಗಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಪಿಡಿಓ ಒಪ್ಪದಿದ್ದಾಗ ಕಚೇರಿ ಹೊರ ಬಾಗಿಲಿಗೆ ಬೀಗ ಜಡಿದು ಹೊಗಿದ್ದಾರೆ. ಇದರಿಂದ ವಿಚಲಿತರಾದ ಪಿಡಿಓ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಭಾಲ್ಕಿ ಸಿಪಿಐ ರಮೇಶಕುಮಾರ್ ಮೈಲೂರಕರ ದಿಗ್ಭಂಧನಕ್ಕೊಳಗಾದ ಅಧಿಕಾರಿಯನ್ನು ಮುಕ್ತಗೊಳಿಸಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಸತತ ಕಿರುಕುಳ ನೀಡಲಾಗ್ತಿದೆ ಎಂದು ಪಿಡಿಓ ಜ್ಞಾನೇಂದ್ರ ಪೊಲೀಸರ ಮುಂದೆ ಅಳಲು ತೊಡಿಕೊಂಡಿದ್ದಾರೆ.