ಬೀದರ್: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ಧೇಶದಿಂದ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಂಪನಿಯ ನಿಷ್ಕಾಳಜಿಯಿಂದ ಮೂಲೆಗುಂಪಾಗಿವೆ.
ಶುದ್ಧ ನೀರಿನ ಘಟಕ ಈಗ ಅಶುದ್ಧ... ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನೆನೆಗುದಿಗೆ!
ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ಧೇಶದಿಂದ ಜಿಲ್ಲೆಯಲ್ಲಿ 130 ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಂಪನಿಯ ನಿಷ್ಕಾಳಜಿಯಿಂದ ಮಹತ್ವಾಕಾಂಕ್ಷಿ ಯೋಜನೆ ನೆಲಕಚ್ಚಿದೆ.
ಪ್ರತಿ ಪಂಚಾಯತ್ನಲ್ಲೊಂದು ಎಂಬಂತೆ ಜಿಲ್ಲೆಯ ಬಹುತೇಕ ಪಂಚಾಯತ್ಗಳಲ್ಲಿ ಒಂದು ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದ್ರೆ ಕೆಲವು ಘಟಕಗಳಿಗೆ ಬೀಗ ಹಾಕಲಾಗಿದ್ರೆ ಮತ್ತೆ ಕೆಲವು ಆರಂಭಕ್ಕೂ ಮುನ್ನ ಕೆಟ್ಟು ಹೋಗಿ ಧೂಳು ತಿನ್ನುತ್ತಿವೆ. ಈ ಘಟಕಗಳಿಂದ ಜನರು ಒಂದು ಬಿಂದಿಗೆ ನೀರು ಪಡೆಯದಷ್ಟು ಅಪ್ರಯೋಜಕವಾಗಿ ತುಕ್ಕು ಹಿಡಿದು, ಮಹತ್ವಕಾಂಕ್ಷಿ ಯೋಜನೆ ಆರಂಭಕ್ಕೂ ಮುನ್ನ ನೆಲಕಚ್ಚಿದೆ.
ಅಪೂರ್ಣ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ನೆನೆಗುದಿಗೆ ಬಿದ್ದಿದೆ. ಅನೇಕ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಇದುವರೆಗೂ ಯಾರೊಬ್ಬರೂ ಇತ್ತ ತಲೆ ಕೂಡ ಹಾಕಿಲ್ಲ ಅಂತಾರೆ ಹೋರಾಟಗಾರರು.