ಬೀದರ್:ದೆಹಲಿ ನೆಹರೂ ವಿವಿಯಲ್ಲಿ ವಿವೇಕಾನಂದರ ಪುತ್ಥಳಿ ವಿರೂಪ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ (ಎಬಿವಿಪಿ) ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿವೇಕಾನಂದರ ಪುತ್ಥಳಿ ವಿರೂಪಕ್ಕೆ ಖಂಡನೆ: ಎಬಿವಿಪಿಯಿಂದ ಬೃಹತ್ ಪ್ರತಿಭಟನೆ - ಪ್ರತಿಭಟನೆ ಬೀದರ್ ಸುದ್ದಿ
ದೆಹಲಿ ನೆಹರೂ ವಿವಿಯಲ್ಲಿ ವಿವೇಕಾನಂದರ ಪುತ್ಥಳಿ ವಿರೂಪ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿಯಿಂದ ಬೃಹತ್ ಪ್ರತಿಭಟನೆ
ನಗರದ ಸರಸ್ವತಿ ಕಾಲೇಜ್‌ನಿಂದ ಮುಖ್ಯ ರಸ್ತೆ ಮಾರ್ಗವಾಗಿ ಭಗತಸಿಂಗ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಇನ್ನು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣ್ಣಸಿದ್ದ ಜಾಡರ ಮಾತನಾಡಿ, ದೇಶದ ಅಭಿವೃದ್ದಿ ಸಹಿಸದ, ದೇಶದ ಸವಿಂಧಾನ ಒಪ್ಪದ ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.