ಕರ್ನಾಟಕ

karnataka

ETV Bharat / state

ಬೀದರ್: ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಕರೆ ನೀಡಿದ್ದ ಬಂದ್​ಗೆ ನೀರಸ ಪ್ರತಿಕ್ರಿಯೆ - Bidar band news

ಬಂದ್​ಗೆ ಕರೆ ನೀಡಿದರೂ ಅಂಗಡಿ - ಮುಂಗಟ್ಟು ತೆರೆದಿದ್ದವು. ವಾಹನ ಹಾಗೂ ಜನರ ಸಂಚಾರವೂ ಎಂದಿನಂತೆ ಕಂಡು ಬಂದಿತು..

Protest in Bidar by madiga Dandora Fight Committee
ಮಾದಿಗ ದಂಡೋರ ಹೋರಾಟ ಸಮಿತಿ ವತಿಯಿಂದ ಬೀದರ್​ನಲ್ಲಿ ಪ್ರತಿಭಟನೆ

By

Published : Oct 11, 2021, 2:36 PM IST

ಬೀದರ್: ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಹಾಗೂ ಸಚಿವ ಪ್ರಭು ಚೌಹಾಣ್ ಅವರು ವರದಿ ಒಪ್ಪದಿರುವ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಮಾದಿಗ ದಂಡೋರ ಸಮಿತಿ ಕರೆ ನೀಡಿರುವ ಬೀದರ್ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾದಿಗ ದಂಡೋರ ಹೋರಾಟ ಸಮಿತಿ ವತಿಯಿಂದ ಇಂದು ನಗರದ ಅಂಬೇಡ್ಕರ ವೃತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ, ಪ್ರತಿಭಟನಾಕಾರರು ಸಚಿವ ಪ್ರಭು ಚೌಹಾಣ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾದಿಗ ದಂಡೋರ ಹೋರಾಟ ಸಮಿತಿ ವತಿಯಿಂದ ಬೀದರ್​ನಲ್ಲಿ ಪ್ರತಿಭಟನೆ

ಬಂದ್​ಗೆ ಕರೆ ನೀಡಿದರೂ ಕೂಡ ಅಂಗಡಿ - ಮುಂಗಟ್ಟು ತೆರೆದಿದ್ದವು. ವಾಹನ ಹಾಗೂ ಜನರ ಸಂಚಾರವೂ ಎಂದಿನಂತೆ ಕಂಡು ಬಂದಿತು.

ABOUT THE AUTHOR

...view details