ಕರ್ನಾಟಕ

karnataka

ETV Bharat / state

ಬೀದರ್ ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿ... ತರಕಾರಿ, ಕಿರಾಣಿ ಹಾಗೂ ಔಷಧಿ ಅಂಗಡಿ ಬಿಟ್ಟು ಎಲ್ಲವೂ ಬಂದ್!

ಮಾಹಾಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬೀದರ್​ನಲ್ಲಿ ತರಕಾರಿ, ಕಿರಾಣಿ ಹಾಗೂ ಔಷಧಿ ಅಂಗಡಿ ಹೊರತುಪಡಿಸಿ ಎಲ್ಲವೂ ನಿಷೇಧಿಸಲಾಗಿದೆ.

prohibition-in-bidar-district
ಜಿಲ್ಲಾಧಿಕಾರಿಗಳು

By

Published : Mar 20, 2020, 4:58 AM IST

ಬೀದರ್:ಮಾಹಾಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬೀದರ್ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್ ಕಠಿಣ ಕ್ರಮ ಕೈಗೊಂಡಿದ್ದು, ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದಲ್ಲಿ ತರಕಾರಿ, ಕಿರಾಣಿ ಹಾಗೂ ಔಷಧಿ ಅಂಗಡಿ ಹೊರತುಪಡಿಸಿ ಎಲ್ಲವೂ ನಿಷೇಧಿಸಲಾಗಿದೆ. ಐದಕ್ಕಿಂತ ಜಾಸ್ತಿ ಜನರು ಗುಂಪು ಕಟ್ಟಿಕೊಂಡು ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೆ ಕಲ್ಯಾಣ ಮಂಟಪ, ಫಂಕ್ಷನ್ ಹಾಲ್​​ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಹೇರ್​​ ಕಟಿಂಗ್ ಸಲೂನ್, ಪಾರ್ಲರ್ ಅಂಗಡಿ ತೆರೆಯುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿದೇಶದಿಂದ ಬಂದ ಯಾವುದೇ ಪ್ರವಾಸಿಗರು ಮನೆಗೆ ಬಂದ್ರೆ ಅವರಿಗೆ 14 ದಿನಗಳ ಕಾಲ ಪ್ರತ್ಯೇಕವಾಗಿರಿಸುವುದು. ಉದ್ಯಾನವನ, ಸರ್ಕಾರಿ ಕಾರ್ಯಕ್ರಮ, ನಾಟಕ ಪ್ರದರ್ಶನ, ಜಾತ್ರೆ, ಸಂಗೀತ ಕಾರ್ಯಕ್ರಮ, ಮ್ಯಾರಥಾನ್​​, ಸ್ವಿಮ್ಮಿಂಗ್​​ ಜಿಮ್, ಫಿಟ್​ನೆಸ್​​​​ ಸೆಂಟರ್ ಎಲ್ಲದಕ್ಕೂ ನಿಷೇಧಿಸಲಾಗಿದೆ.

ಪೂರ್ವ ನಿಗದಿತ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಗಳಲ್ಲಿ 25 ಕ್ಕಿಂತ ಹೆಚ್ಚು ಜನ ಸೇರದಂತೆ ನಿಗಾ ವಹಿಸುವುದು. ಅಲ್ಲದೆ ಕೊರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಶಂಕಿತ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಗಳು ಬರುವ ಸಾಧ್ಯತೆ ಇರುವುದರಿಂದ ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾ ದಂಡಾಧಿಕಾರಿಗಳು ದಂಡ ಸಂಹಿತೆ 1973ರ ಸಿಆರ್​​ಪಿಸಿ ಸೆಕ್ಷನ್​​​ 144 ರ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಿ 19 ಮಾರ್ಚ್ ನಿಂದ 31 ಮಾರ್ಚ್​ನ ಮಧ್ಯರಾತ್ರಿ 12 ಗಂಟೆವರೆಗೆ ಅನ್ವಯವಾಗುವಂತೆ ಆದೇಶಿಸಲಾಗಿದೆ.

ABOUT THE AUTHOR

...view details