ಬೀದರ್: ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಬಾಮೈದನಿಂದಲೇ ವ್ಯಕ್ತಿ ಕೊಲೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅನೈತಿಕ ಸಂಬಂಧದ ಕಿರಿಕ್, ಬಾಮೈದನಿಂದಲೇ ಕೊಲೆಯಾದ ಕನ್ನಡಪರ ಹೋರಾಟಗಾರ - ಕನ್ನಡಪರ ಸಂಘಟನೆ ಹೋರಾಟಗಾರ
ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಬಾಮೈದನಿಂದಲೇ ಕನ್ನಡಪರ ಸಂಘಟನೆ ಹೋರಾಟಗಾರ ಕಮ್ ರೌಡಿಶೀಟರ್ ಸಾವನ್ ವಾಗ್ಲೆ, ಕೊಲೆಯಾಗಿರುವ ಘಟನೆ ಬೀದರ್ನಲ್ಲಿ ನಡೆದಿದೆ.
ಕನ್ನಡಪರ ಸಂಘಟನೆಯೊಂದರ ಜಿಲ್ಲಾಧ್ಯಕ್ಷ ಸಾವನ್ ವಾಗ್ಲೆ, ಕೊಲೆಯಾದ ವ್ಯಕ್ತಿ. ಕಳೆದ ಒಂದು ವಾರದ ಹಿಂದೆ ನಗರದ ಲೇಬರ್ ಕಾಲೋನಿಯಲ್ಲಿರುವ ಸಾವನ್ ವಾಗ್ಲೆಯ ಪತ್ನಿ ವಸಂತ ಮಾಲಾ ಮನೆ ಎದುರು ಮಾತು ಮಾತಿನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಪರಸ್ತ್ರೀಯರೊಂದಿಗೆ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಹೆಂಡತಿ ಜಗಳ ಆರಂಭಿಸಿದ್ದಾಳೆ. ಈ ವೇಳೆ ಸ್ಥಳದಲ್ಲೇ ಇದ್ದ ವಸಂತ ಮಾಲಾ ಅವರ ಸಹೋದರ ಪ್ರವೀಣ, ಕಬ್ಬಿಣದ ಸಲಾಕೆಯಿಂದ ಸಾವನ್ ವಾಗ್ಲೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಸಾವನ್ ವಾಗ್ಲೆಯನ್ನು ಹೈದ್ರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 5 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇನ್ನು ಕೊಲೆಯಾದ ಸಾವನ್ ವಾಗ್ಲೆ, ರೌಡಿಶೀಟರ್ ಆಗಿದ್ದು, ಜಿಲ್ಲೆಯ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.