ಬೀದರ್: ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ನಟೋರಿಯಸ್ ಆರೋಪಿವೋರ್ವ ಸಿನಿಮಾ ಸ್ಟೈಲ್ನಲ್ಲಿ ಜೈಲಿನಿಂದ ಪರಾರಿಯಾಗಿದ್ದಾನೆ.
ಬೀದರ್ ಜೈಲಿನಿಂದ ಸಿನಿಮಾ ಸ್ಟೈಲ್ನಲ್ಲಿ ಕೈದಿ ಪರಾರಿ - ಬೀದರ್ ಕಾರಾಗೃಹ
ರಾಘವೇಂದ್ರ ಎಂಬ ಕೈದಿ ಬೀದರ್ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ. ಭಾನುವಾರ ಸಂಜೆ ವೇಳೆ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಜೈಲಿನ ಗೋಡೆಯಿಂದ ಹಾರಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸಿನಿಮಾ ಸ್ಟೈಲ್ನಲ್ಲಿ ಕೈದಿ ಪರಾರಿ
ರಾಘವೇಂದ್ರ ಎಂಬ ಕೈದಿ ಜೈಲಿನಿಂದ ಎಸ್ಕೇಪ್ ಆದವನು ಎಂದು ಹೇಳಲಾಗಿದೆ. ಭಾನುವಾರ ಸಂಜೆ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಜೈಲಿನ ಗೋಡೆಯಿಂದ ಹಾರಿ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ.
ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವ ರಾಘವೇಂದ್ರ ಜಿಲ್ಲಾ ಕಾರಾಗೃಹದಲ್ಲಿದ್ದ. ಪರಾರಿಯಾದ ಕೈದಿಯನ್ನು ನಗರದ ಸುತ್ತಲಿನ ಭಾಗದಲ್ಲಿ ಹುಡಕಾಡಿದರೂ ಪತ್ತೆಯಾಗಿಲ್ಲ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.