ಬೀದರ್ :ಜಿಲ್ಲೆಯ ಬಸವ ಕಲ್ಯಾಣದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಪ್ರಧಾನಿಯಿಂದ ಅನುಭವ ಮಂಟಪ ಲೋಕಾರ್ಪಣೆಗೆ ನಿರ್ಧಾರ : ಸಚಿವ ಪ್ರಭು ಚೌಹಾಣ್ - ಪ್ರಧಾನಿಯಿಂದ ಅನುಭವ ಮಂಟಪ ಲೋಕಾರ್ಪಣೆ
ನಮ್ಮ ನಾಯಕ ಸಿಎಂ ಬಿಎಸ್ವೈ ಅವರು ನುಡಿದಂತೆ ನಡೆದಿದ್ದಾರೆ. ಅನುಭವ ಮಂಟಪಕ್ಕೆ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕಾಮಗಾರಿಯೂ ಆರಂಭಿಸಲಾಗುತ್ತೆ..
ನಗರದ ಬೇಲ್ದಾಳೆ ಫಂಕ್ಷನ್ ಹಾಲ್ನಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಲಾದ ಜನ ಸೇವಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಎರಡು ವರ್ಷದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯ ಮುಗಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ವಿಖ್ಯಾತ ಅನುಭವ ಮಂಟಪದ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಬೆಳಗ್ಗೆ ಒಂದು ಸುಳ್ಳು, ಮಧ್ಯಾಹ್ನ ಒಂದು ಸುಳ್ಳು ಹೇಳಿ ರಾತ್ರಿ ಮತ್ತೊಂದು ಸುಳ್ಳು ಹೇಳಿ ಮನೆಗೆ ಹೋಗುತ್ತದೆ. ಆದ್ರೆ, ನಮ್ಮ ನಾಯಕ ಸಿಎಂ ಬಿಎಸ್ವೈ ಅವರು ನುಡಿದಂತೆ ನಡೆದಿದ್ದಾರೆ. ಅನುಭವ ಮಂಟಪಕ್ಕೆ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕಾಮಗಾರಿಯೂ ಆರಂಭಿಸಲಾಗುತ್ತೆ ಎಂದು ಚೌಹಾಣ್ ಹೇಳಿದರು.