ಕರ್ನಾಟಕ

karnataka

ETV Bharat / state

ಮುಂಬೈನ ಪ್ರಭು ಚವ್ಹಾಣಗೆ ಒಲಿಯಲಿದೆಯಾ ಮಂತ್ರಿ ಭಾಗ್ಯ...? - ಬಿಜೆಪಿ

ಮಹಾರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದಲ್ಲಿ ಎಂಟ್ರಿ ಕೊಟ್ಟು ಬಿಜೆಪಿಯಿಂದ ಮೂರು ಬಾರಿ ಶಾಸಕರಾದ ಪ್ರಭು ಚವ್ಹಾಣ ಈಗ ಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂಬೈನ ಪ್ರಭು ಚವ್ಹಾಣಗೆ ಒಲಿಯಲಿದೆಯಾ ಮಂತ್ರಿ ಭಾಗ್ಯ...? ಎಂಬ ಚರ್ಚೆಗಳು ಸಾಗಿವೆ.

ಪ್ರಭು ಚವ್ಹಾಣ

By

Published : Jul 27, 2019, 2:20 PM IST

ಬೀದರ್:ಮಹಾರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದಲ್ಲಿ ಎಂಟ್ರಿ ಕೊಟ್ಟು ಬಿಜೆಪಿಯಿಂದ ಮುರು ಬಾರಿ ಶಾಸಕರಾದ ಪ್ರಭು ಚವ್ಹಾಣ ಈಗ ಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ಜಿಲ್ಲೆಯ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಸತತ ಮೂರು ಬಾರಿ ಶಕ್ತಿ ಸೌಧಕ್ಕೆ ಆಯ್ಕೆಯಾದ ಪ್ರಭು ಚವ್ಹಾಣ, ಈಗ ಬಿಎಸ್ ವೈ ಸಂಪುಟಕ್ಕೆ ಸೇರಲಿದ್ದಾರೆ ಎನ್ನಲಾಗ್ತಿದೆ. ಮಹಾರಾಷ್ಟ್ರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ಮಾಡ್ತಿದ್ದ ಪ್ರಭು ಚವ್ಹಾಣ ಬಿಜೆಪಿ ಹಿರಿಯ ನಾಯಕ ದಿ.ಗೋಪಿನಾಥ್ ಮುಂಡೆ ಅವರ ಶಿಷ್ಯರಾಗಿದ್ದಕ್ಕೆ 2008 ರಲ್ಲಿ ಔರಾದ್ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ನೀಡಿತ್ತು.

ಯಡಿಯೂರಪ್ಪ ಮತ್ತು ಪ್ರಭು ಚವ್ಹಾಣ

2013 ರಲ್ಲಿ ಬಿಜೆಪಿಗೆ ಪಕ್ಷ ನಿಷ್ಠೆ ತೋರಿದ ಪ್ರಭು ಚವ್ಹಾಣ, ಯಡಿಯೂರಪ್ಪ ಕಟ್ಟಿದ ಕೆಜೆಪಿಗೆ ಹೊಗದೇ ಪಕ್ಷದಲ್ಲೆ ಉಳಕೊಂಡು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದ್ರು. ನಂತರ 2018 ರ ಚುನಾವಣೆಯಲ್ಲೂ ಗೆಲುವು ಸಾಧಿಸಿ ಸರಣಿ ಗೆಲುವಿನ ಸಾಧನೆ ಬೆನ್ನಿಗಿಟ್ಟಕೊಂಡು, ಈಗ ಬಿಎಸ್ ವೈ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ.

ಚಿಂಚೋಳಿ ಆಪರೇಷನ್ ನಲ್ಲಿ ಮಹತ್ವದ ಪಾತ್ರ:

ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಾಗಿನಿಂದ ಪ್ರಭು ಚವ್ಹಾಣ ಅವರು ಕಾಂಗ್ರೆಸ್ ಶಾಸಕರಾಗಿದ್ದ ಡಾ‌.ಉಮೇಶ ಜಾಧವ್ ಅವರನ್ನು ಪಕ್ಷಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಉಮೇಶ ಜಾಧವ್ ಬಿಜೆಪಿ ಸೇರ್ಪಡೆಯಾಗಿ ಲೋಕಸಭೆ ಸದಸ್ಯರಾದ್ರು. ಈಗ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಹಿರಿಯ ಶಾಸಕರಾದ ಪ್ರಭು ಚವ್ಹಾಣಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಗ್ಯಾರಂಟಿ ಎಂಬ ಮಾತು ಎಲ್ಲೆಡೆ ಕೇಳಿ ಬರ್ತಿದೆ.

ABOUT THE AUTHOR

...view details