ಬೀದರ್:ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಬಿಜೆಪಿಗೆ ದೋಖಾ ಆಗಿದೆ. ಅತಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿಯನ್ನು ಅಧಿಕಾರದಿಂದ ವಂಚಿಸಲು ಶಿವಸೇನೆ ಮೋಸದಾಟ ಆಡಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಬಿಜೆಪಿಗೆ ದೋಖಾ: ಪ್ರಭು ಚವ್ಹಾಣ್ ವಾಗ್ದಾಳಿ - BJP
ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಬಿಜೆಪಿಗೆ ದೋಖಾ ಆಗಿದೆ. ಅತಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿಯನ್ನು ಅಧಿಕಾರದಿಂದ ವಂಚಿಸಲು ಶಿವಸೇನೆ ಮೋಸದಾಟ ಆಡಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ವಾಗ್ದಾಳಿ ನಡೆಸಿದ್ದಾರೆ.

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನಾ ಮುಖ್ಯಸ್ಥ ದಿ.ಬಾಳ್ ಸಾಹೇಬ್ ಠಾಕ್ರೆ ಅವರಿದ್ದಾಗ ಬಿಜೆಪಿಯೊಂದಿಗೆ ಒಪ್ಪಂದವಾಗಿ ಅತಿ ಹೆಚ್ಚು ಸ್ಥಾನ ಗೆದ್ದವರು ಸಿಎಂ ಆಗಬೇಕು ಎಂದಿತ್ತು. ಹೀಗಾಗಿ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್ ಅವರು ಜನಪರ ಕೆಲಸ ಮಾಡಿದ್ದಾರೆ. ಅವರ ಏಳಿಗೆ ಹಾಗೂ ಬಿಜೆಪಿ ಬೆಳೆಯುತ್ತಿರುವುದನ್ನು ತಡೆಯಲು ಎನ್ಸಿಪಿ, ಕಾಂಗ್ರೆಸ್ ನಡೆಸಿದ ಕುತಂತ್ರ ರಾಜಕೀಯದ ಪರಿಣಾಮದಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.