ಬೀದರ್: ಕೊವಿಡ್-19 ಸೋಂಕು ತಡೆಗಟ್ಟಲು ಸರ್ಕಾರದ ಜೊತೆ ಕೈಜೋಡಿಸಿದ್ದ ಗರಗದ ವಾಲಿಶ್ರೀ ಆಸ್ಪತ್ರೆಗೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊರೊನಾ ಚಿಕಿತ್ಸೆಗೆ ಬೆಡ್ ನೀಡಿದ ಖಾಸಗಿ ಆಸ್ಪತ್ರೆಗೆ ಪ್ರಭು ಚೌಹಾಣ್ ಭೇಟಿ - Prabhu Chauhan
ವಾಲಿಶ್ರೀ ಆಸ್ಪತ್ರೆಯ ಒಂದು ಭಾಗವನ್ನು ಕೋವಿಡ್ ಕೇರ್ ಎಂದು ಘೋಷಣೆ ಮಾಡುವ ಮೂಲಕ ಕೊರೊನಾ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ ಸುಸಜ್ಜಿತ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಕೂಡ ವಿಶೇಷವಾಗಿದೆ ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ.
ಕೊರೊನಾಗೆ ಬೆಡ್ ನೀಡಿದ ಖಾಸಗಿ ಆಸ್ಪತ್ರೆಗೆ ಪ್ರಭು ಚೌವ್ಹಾಣ್ ಭೇಟಿ
ಆಸ್ಪತ್ರೆಯಲ್ಲಿನ 80 ಬೆಡ್ಗಳನ್ನು ನೀಡುವ ಮೂಲಕ ಸಂಕಷ್ಟದ ಘಳಿಗೆಯಲ್ಲಿ ಸಾರ್ವಜನಿಕ ಸಹಕಾರಕ್ಕೆ ಮುಂದಾದ ವಾಲಿಶ್ರೀ ಆಸ್ಪತ್ರೆ ಮುಖ್ಯಸ್ಥ ರಜನೀಶ್ ವಾಲಿ ಕಾರ್ಯವನ್ನು ಸಚಿವ ಪ್ರಭು ಚೌಹಾಣ್ ಪ್ರಶಂಸಿಸಿದರು.
ವಾಲಿಶ್ರೀ ಆಸ್ಪತ್ರೆಯ ಒಂದು ಭಾಗವನ್ನು ಕೊವಿಡ್ ಕೇರ್ ಎಂದು ಘೋಷಣೆ ಮಾಡುವ ಮೂಲಕ ಕೊರೊನಾ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ ಸುಸಜ್ಜಿತ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಕೂಡ ವಿಶೇಷವಾಗಿದೆ ಎಂದು ಪ್ರಭು ಚೌಹಾಣ್ ಹೇಳಿದರು.