ಬೀದರ್:ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಬೀದರ್ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಗೊಳಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ.
ಬೀದರ್, ಯಾದಗಿರಿ ಲಾಕ್ಡೌನ್ ಆಗುತ್ತಾ? ಸಂಜೆ 4.30ಕ್ಕೆ ನಿರ್ಧಾರ - Bidar news
ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿಗೊಳಿಸಬೇಕಾ ಅಥವಾ ಬೇಡ್ವಾ ಎಂಬ ವಿಚಾರದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿದ ನಂತರ ಇಂದು ಸಂಜೆ 4.30ಕ್ಕೆ ಲಾಕ್ಡೌನ್ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಪ್ರಭು ಚವ್ಹಾಣ
ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಸೋಂಕಿತರು ಹೆಚ್ಚಾಗಿದ್ದಾರೆ. ಈ ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿರುವ ಪ್ರಭು ಚವ್ಹಾಣ, ಏಕಕಾಲದಲ್ಲಿ ಲಾಕ್ಡೌನ್ ಸಂಬಂಧ ತೀರ್ಮಾನ ಪ್ರಕಟಿಸಲಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಸುದ್ದಿಗೊಷ್ಠಿಯಲ್ಲಿ ಲಾಕ್ಡೌನ್ ಜಾರಿಯಾದ್ರೆ ಹೇಗಿರಬೇಕು? ಎಷ್ಟು ದಿನ ಇರಬೇಕು? ಬಡವರು, ನಿರ್ಗತಿಕರ ಉಪ ಜೀವನಕ್ಕೆ ಹೇಗೆ ಆಧಾರವಾಗಬೇಕು? ಜನರು ಯಾವ ರೀತಿ ಸ್ಪಂದಿಸಬೇಕು ಎಂಬುದರ ಕುರಿತು ವಿಸ್ತಾರವಾಗಿ ಮಾತನಾಡುವ ಸಾಧ್ಯತೆ ಇದೆ.