ಬಸವಕಲ್ಯಾಣ (ಬೀದರ್): ಬೆಳೆಗೆ ನೀರು ಹರಿಸಲೆಂದು ಮೋಟಾರ್ ಪಂಪ್ಸೆಟ್ ಸ್ಟಾರ್ಟ್ ಮಾಡಲು ಹೋದ ಯುವ ರೈತನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಗುಂಡೂರ ಗ್ರಾಮದಲ್ಲಿ ನಡೆದಿದೆ.
ಪಂಪ್ಸೆಟ್ ಸ್ಟಾರ್ಟ್ ಮಾಡಲು ಹೋದಾಗ ವಿದ್ಯುತ್ ತಗುಲಿ ಯುವ ರೈತ ಸಾವು - Young farmer death
ಬಸವಕಲ್ಯಾಣ ತಾಲೂಕಿನ ಗುಂಡೂರ ಗ್ರಾಮದಲ್ಲಿ ರೈತನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ನಡೆದಿದೆ. ಬೆಳೆಗೆ ನೀರು ಹರಿಸಲೆಂದು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಮೃತ ಯುವ ರೈತ
ಗ್ರಾಮದ ವಿಕಾಶ ದತ್ತು ಸೂರ್ಯವಂಶಿ (25) ಮೃತ ರೈತ. ಜಮೀನಿನಲ್ಲಿ ಕಬ್ಬಿನ ಗದ್ದೆಗೆ ನೀರು ಹರಿಸಲೆಂದು ಮೋಟಾರ್ ಸ್ಟಾರ್ಟ್ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಇನ್ನು ವಿದ್ಯುತ್ ತಗುಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಈತನನ್ನು ಸ್ಥಳೀಯರು ಮಂಠಾಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಮಂಠಾಳ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
Last Updated : May 12, 2020, 12:06 AM IST