ಕರ್ನಾಟಕ

karnataka

ETV Bharat / state

ಪೆಟ್ರೋಲ್ ಬಂಕ್​ಗೆ ಬಂದವ್ರಿಗೆ ಬಿತ್ತು ಬಿಸಿ ಬಿಸಿ ಲಾಠಿ ಏಟು - ಲಾಠಿ ಏಟು

ವಾಹನಗಳಿಗೆ ಪೆಟ್ರೋಲ್​ ಹಾಕಿಸಲು ಪೆಟ್ರೋಲ್​ ಬಂಕ್​ಗೆ ಬಂದ ವಾಹನ ಸವಾರರಿಗೆ ಭಾಲ್ಕಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

petrol bunk
ಪೆಟ್ರೋಲ್ ಬಂಕ್

By

Published : Apr 8, 2020, 1:12 PM IST

ಬೀದರ್:ಬೈಕ್​ಗಳಿಗೆ ಇಂಧನ ಪೂರೈಸದಂತೆ ಪೆಟ್ರೋಲ್ ಬಂಕ್​​ಗಳಿಗೆ ನಿರ್ಬಂಧ ವಿಧಿಸಿದ್ದರೂ, ಬಂಕ್​ ಮುಂದೆ ಬಂದಿದ್ದ ಸವಾರರಿಗೆ ಭಾಲ್ಕಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಪೆಟ್ರೋಲ್ ಬಂಕ್​ಗೆ ಬಂದವ್ರಿಗೆ ಬಿತ್ತು ಬಿಸಿ ಬಿಸಿ ಲಾಠಿ ಏಟು

ಜಿಲ್ಲೆಯ ಭಾಲ್ಕಿ ಪಟ್ಟಣ ಹುಮನಾಬಾದ್ ರಸ್ತೆಯಲ್ಲಿರುವ ಪೆಟ್ರೊಲ್ ಬಂಕ್​ನಲ್ಲಿ ಬೆಳಗ್ಗೆಯಿಂದ ಬೈಕ್ ಮತ್ತು ಇತರೆ ವಾಹನಗಳು ಪೆಟ್ರೊಲ್ ಹಾಗೂ ಡಿಸೇಲ್ ಹಾಕಿಸಿಕೊಳ್ಳಲು ಮುಗಿ ಬಿದ್ದಿದ್ದರು. ಈ ವೇಳೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ವಾಹನ ಸವಾರರಿಗೆ ಲಾಠಿ ಬಿಸಿ ಮುಟ್ಟಿಸಿದ್ದಾರೆ.

ಇದೇ ವೇಳೆ ಹಲವರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ ಬೇಕಾ ಬಿಟ್ಟಿಯಾಗಿ ಬಂಕ್​ನಲ್ಲಿ ಸುತ್ತಾಡುತ್ತಿದ್ದವರಿಗೆಲ್ಲರಿಗೂ ಪೊಲೀಸರು ಮನೆಯಿಂದ ಹೊರಗೆ ಬರದಂತೆ ವಾರ್ನ್ ಮಾಡಿ ಲಾಠಿ ರುಚಿ ತೋರಿಸಿ ಕಳಿಸಿದ್ದಾರೆ.

ABOUT THE AUTHOR

...view details